ಆದಿವಾಸಿ ಯುವಕನ ಮೇಲೆ ಬಿಜೆಪಿ ಮುಖಂಡ ಎನ್ನಲಾದ ವ್ಯಕ್ತಿಯಿಂದ ಮೂತ್ರ ವಿಸರ್ಜನೆ: ವೀಡಿಯೋ ವೈರಲ್
Photo: Twitter
ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ನಾಯಕ ಎನ್ನಲಾದ ವ್ಯಕ್ತಿಯೊಬ್ಬ ಆದಿವಾಸಿ ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಅಮಾನವೀಯ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯದ್ದು ಎನ್ನಲಾಗಿದೆ.
ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಟೀಕೆ ವ್ಯಕ್ತವಾಗುತ್ತಿದೆ. ಆರೋಪಿಯನ್ನು ಸಿಧಿ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ಆಪ್ತ ಪ್ರವೇಶ್ ಶುಕ್ಲಾ ಎನ್ನಲಾಗಿದೆ ಎಂದು ಹಲವು ವರದಿಗಳು ತಿಳಿಸಿವೆ.
ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಟ್ವಿಟರ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ʼಆದಿವಾಸಿಗಳ ಹಿತಾಸಕ್ತಿ ಬಗ್ಗೆ ಸುಳ್ಳು ಮಾತನಾಡುವ ಬಿಜೆಪಿ ನಾಯಕರು ಬುಡಕಟ್ಟು ಜನಾಂಗದ ಬಡ ವ್ಯಕ್ತಿ ಮೇಲೆ ಈ ರೀತಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಖಂಡನೀಯʼ ಎಂದು ಬರೆದಿದ್ದಾರೆ.
सत्ता का नशा, caste का नशा … क्या होता है, आपको इस वीडियो में दिखेगा …
— Supriya Bhardwaj (@Supriya23bh) July 4, 2023
एक आदिवासी लड़के पर urinate करने वाला यह मानसिक रोगी प्रवेश शुक्ला है … मध्यप्रदेश का रहने वाला है और ये ख़ुद को भाजपा के एक विधायक का प्रतिनिधि बताता है
इस पर कड़ी से कड़ी कार्यवाही हो … pic.twitter.com/Qp32IoCbtt
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದು, "ಇದು ನಿಮ್ಮ ಬುಡಕಟ್ಟು ಪ್ರೀತಿಯೇ? ಇದನ್ನು ಜಂಗಲ್ ರಾಜ್ ಎಂದಲ್ಲದೆ ಇನ್ನೇನು ಕರೆಯಬೇಕು? ಅಲ್ಲದೆ, ಬಿಜೆಪಿ ನಾಯಕನನ್ನು ಏಕೆ ಬಂಧಿಸಲಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ.
ಆರೋಪಿಯನ್ನು ಪ್ರವೇಶ್ ಶುಕ್ಲಾ ಎಂದು ಹೇಳಲಾಗುತ್ತಿದೆ, ಆತ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾರ ಪ್ರತಿನಿಧಿಯಾಗಿದ್ದಾನೆ. ಆದಿವಾಸಿ ಯುವಕರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ಆರೋಪಿ ಬಿಜೆಪಿ ನಾಯಕರೊಂದಿಗೆ ನಿಂತಿರುವ ಹಲವಾರು ಫೋಟೋಗಳಿವೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ದೆಹಲಿಯ ಎಎಪಿ ಶಾಸಕ ನರೇಶ್ ಬಲ್ಯಾನ್ ಕೂಡ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಿಎಂ ಚೌಹಾಣ್ಗೆ ಟ್ಯಾಗ್ ಮಾಡಿದ ಅವರು, ಈ ರಾಕ್ಷಸ ಬಡವನ ಮುಖದ ಮೇಲೆ ಮಾತ್ರ ಮೂತ್ರ ವಿಸರ್ಜಿಸುತ್ತಿಲ್ಲ, ಇಡೀ ವ್ಯವಸ್ಥೆಯ ಮೇಲೆ ಮೂತ್ರ ವಿಸರ್ಜಿಸುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, "ಸೀಧಿ ಜಿಲ್ಲೆಯಲ್ಲಿ ನಡೆದಿರುವ ಘಟನೆಯ ಕುರಿತಾದ ವೈರಲ್ ವೀಡಿಯೊವೊಂದು ನನ್ನ ಗಮನಕ್ಕೆ ಬಂದಿದೆ. ಆರೋಪಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
मेरे संज्ञान में सीधी जिले का एक वायरल वीडियो आया है...
— Shivraj Singh Chouhan (@ChouhanShivraj) July 4, 2023
मैंने प्रशासन को निर्देश दिए हैं कि अपराधी को गिरफ्तार कर कड़ी से कड़ी कार्रवाई कर एनएसए भी लगाया जाए।