INDIA ಮೈತ್ರಿಕೂಟ ಸರಕಾರ ರಚನೆಗೆ ಮುಂದಾಗುವುದಿಲ್ಲ : ವರದಿ
PC ; X
ಹೊಸದಿಲ್ಲಿ : INDIA ಮೈತ್ರಿಕೂಟದ ಪಕ್ಷಗಳು ಸರಕಾರ ರಚನೆಗೆ ಮುಂದಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು news18.com ವರದಿ ಮಾಡಿದೆ.
ದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ INDIA ಮೈತ್ರಿಕೂಟದ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು, ಬಿಜೆಪಿಯ ಫ್ಯಾಸಿಸ್ಟ್ ಚಿಂತನೆಗಳ ವಿರುದ್ಧ ನಮ್ಮ ಮೈತ್ರಿಕೂಟದ ಹೋರಾಟ ಮುಂದುವರೆಯಲಿದೆ ಎಂದು ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಓದಿ ಹೇಳಿದರು.
ಇದರ ಹೊರತಾಗಿ, ಖರ್ಗೆಯವರು ಏನನ್ನೂ ಹೇಳದೇ ಸುದ್ದಿಗೋಷ್ಠಿ ಮುಗಿಸಿದರು.
Next Story