ಮೈಸೂರು ಅರಮನೆ ಸುತ್ತ 'ಝೀರೋ ಟ್ರಾಫಿಕ್ ವಲಯ' ಜಾರಿಗೆ ಚಿಂತನೆ: ಸಚಿವ ಎಚ್.ಸಿ ಮಹದೇವಪ್ಪ
ರು: 'ಅರಮನೆ ಸುತ್ತ ಝೀರೋ ಟ್ರಾಫಿಕ್ ಇರುವಂತೆ ವ್ಯವಸ್ಥೆ ಮಾಡಲಾಗುವುದು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, 'ನಗರದ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ಪ್ರದೇಶದ 200 ಮೀಟರ್ ವ್ಯಾಪ್ತಿಯನ್ನು ಝೀರೊ ಟ್ರಾಫಿಕ್ ಇರುವಂತೆ ಹಾಗೂ ಪರಿಸರ ಸ್ನೇಹಿಯಾಗಿಸಬೇಕೆಂಬ ಉದ್ದೇಶವಿದೆ' ಎಂದು ತಿಳಿಸಿದರು.
'ಇದಕ್ಕಾಗಿ ಪುರಭವನದ ಆವರಣ, ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು' ಎಂದು ಅವರು ಮಾಹಿತಿ ನೀಡಿದರು.
'ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೆ, 2014 ರಲ್ಲಿ ಕೇಂದ್ರದಲ್ಲಿ ಆಸ್ಕರ್ ಫರ್ನಾಂಡೀಸ್ ಸಚಿವರಾಗಿದ್ದು, ನಾನು ರಾಜ್ಯದಲ್ಲಿ ಲೊಕೋಪಯೋಗಿ ಸಚಿವರಾಗಿದ್ದ ವೇಳೆ ಜಾರಿಯಾಗಿದ್ದು, ಇದಕ್ಕೆ ದಾಖಲೆಗಳಿವೆ. ಅಭಿವೃದ್ದೀಯನ್ನೇ ಮಾಡದೆ ನಾವೇ ಮಾಡಿದ್ದು ಎಂದು ಹೇಳಿಕೊಳ್ಳುವ ಜಾಯಮಾನ ನಮಗಿಲ್ಲ' ಎಂದು ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.
Next Story