ನಿಯತವಾಗಿ ನಿಮ್ಮ ಬೆಡ್ಶೀಟ್ ತೊಳೆಯದಿದ್ದರೆ ಈ ಐದು ಸೋಂಕು ತಗುಲುವ ಸಾಧ್ಯತೆ ಹೆಚ್ಚು...
ಸಾಂದರ್ಭಿಕ ಚಿತ್ರ (Credit: freepik.com)
ಸಮಯ ಇಲ್ಲ ಎಂಬ ಕಾರಣಕ್ಕಾಗಿ ಅಥವಾ ಬೆಡ್ಶೀಟ್ ಶುಚಿಗೊಳಿಸುವ ಮಹತ್ವದ ಅರಿವು ಇಲ್ಲದ ಕಾರಣದಿಂದ ನೀವು ಬೆಡ್ಶೀಟ್ಗಳನ್ನು ನಿಯತವಾಗಿ ತೊಳೆಯುತ್ತಿಲ್ಲ ಅಥವಾ ಶುಚಿಗೊಳಿಸುತ್ತಿಲ್ಲ ಎಂದಾದಲ್ಲಿ, ಹಲವು ಚರ್ಮಸೋಂಕುಗಳಿಗೆ ನೀವು ಗುರಿಯಾಗುವ ಅಪಾಯ ಇರುತ್ತದೆ. ಬೆಡ್ಶೀಟ್ಗಳು ಮೇಲ್ನೋಟಕ್ಕೆ ಕೊಳಕಾದಂತೆ ಕಾಣದಿದ್ದರೂ, ಇದರಲ್ಲಿ ಮೃತ ತ್ವಚೆಯ ಕೋಶಗಳು ಮತ್ತು ಬೆವರಿನ ಕಣಗಳು ಸಂಗ್ರಹವಾಗುತ್ತಿರುತ್ತವೆ. ಇದು ಬೊಬ್ಬೆ, ಮೊಡವೆ, ತುರಿಸುವಿಕೆಯಂಥ ಚರ್ಮಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಬೆಡ್ಶೀಟ್ಗಳಲ್ಲಿ ಈ ಎಲ್ಲ ಅಂಶಗಳು ಸೇರಿದಾಗ, ಚರ್ಮಕ್ಕೆ ಉಸಿರಾಟದ ಅವಕಾಶ ತಪ್ಪಿಹೋಗುತ್ತದೆ. ಈ ಕಲ್ಮಶಗಳ ಜತೆಗೆ ಚರ್ಮ ಸಂಪರ್ಕಕ್ಕೆ ಬರುವುದರಿಂದ, ತುರಿಕೆ, ಉರಿ ಮತ್ತು ಚರ್ಮರೋಗಗಳು ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ನಿಯತವಾಗಿ ಬೆಡ್ಶೀಟ್ಗಳನ್ನು ಬದಲಿಸದಿದ್ದರೆ, ಬ್ಯಾಕ್ಟೀರಿಯಾ, ಫಂಗಸ್ ಮತ್ತು ಇತರ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಗೆ ಪೂರಕ ವಾತಾವರನ ನಿರ್ಮಾಣವಾಗುತ್ತದೆ. ಇದು ಬಹುಬಗೆಯ ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು.
ಬೆಡ್ಶೀಟ್ಗಳನ್ನು ನಿಯತವಾಗಿ ಬದಲಾಯಿಸದೇ ಇರುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಚರ್ಮರೋಗ ತಜ್ಞೆ ಡಾ.ರಿಂಕಿ ಕಪೂರ್, "ವಾರಕ್ಕೊಮ್ಮೆ ಬೆಡ್ಶೀಟ್ ಬದಲಾಯಿಸದಿದ್ದರೆ, ನಿದ್ದೆಯ ವೇಳೆ ಅಧಿಕ ಬೆವರುವ ಸಮಸ್ಯೆ ಇದ್ದರೆ, ಚರ್ಮಕ್ಕೆ ಸೋಂಕು ತಗುಲುವ ಸಾಧ್ಯತೆ ಅಧಿಕ. ಮಲಗುವ ಮುನ್ನ ಸ್ನಾನ, ಸಮರ್ಪಕವಾಗಿ ಗಾಯಗಳ ಆರೈಕೆ, ಚರ್ಮಗಳನ್ನು ಶುಚಿಯಾಗಿ ಇಡುವುದು, ಚರ್ಮರೋಗಗಳ ಸಾಧ್ಯತೆ ಕಡಿಮೆ ಮಾಡುತ್ತದೆ. ಯಾವುದೇ ಬಗೆಯ ಚರ್ಮರೋಗದ ಲಕ್ಷಣ ಕಂಡುಂದಲ್ಲಿ ವೈದ್ಯರ ಸಲಹೆ ಪಡೆಯಬೇಕು ಎನ್ನುವುದು ಅವರ ಕಿವಿಮಾತು.
ಕೊಳಕು ಬೆಡ್ಶೀಟ್ಗಳು ಕೂದಲು ಗಂಟುಗಟ್ಟುವಿಕೆಗೆ ಕಾರಣವಾಗಬಹುದು. ಕೂದಲಿನ ಬುಡದಲ್ಲಿ ಉರಿಯೂತಕ್ಕೆ ಇದು ಕಾರಣವಾಗಿ ಸ್ಟೆಪಿಲೋಕಸ್ ಓರಸ್ನಂಥ ಬ್ಯಾಕ್ಟೀರಿಯ ಬೆಳೆಯಲು ಇದು ಪೂರಕವಾಗುತ್ತದೆ. ಜತೆಗೆ ಮೊಡವೆ, ರಿಂಗ್ವರ್ಮ್, ಇಂಪೆಟಿಗೊ, ಗಜಕರ್ಣದಂಥ ಸಮಸ್ಯೆಗಳಿಗೆ ಕೂಡಾ ಕಾರಣವಾಗುತ್ತದೆ.
ಕೃಪೆ: hindustantimes.com