ಜೆಲೆನಾ ಒಸ್ಟಾಪೆಂಕೊಗೆ ಶರಣಾಗಿ ಯು.ಎಸ್ . ಓಪನ್ ನಿಂದ ನಿರ್ಗಮಿಸಿದ ವಿಶ್ವದ ನಂ.1 ಆಟಗಾರ್ತಿ ಸ್ವಿಯಾಟೆಕ್
Swiatek, Photo: Twitter
ನ್ಯೂಯಾರ್ಕ್: ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್ ವಿಶ್ವದ ನಂ. 21 ನೇ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಅಮೆರಿಕ ಓಪನ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ 16 ರ ಸ್ಪರ್ಧೆಯಲ್ಲಿ 6-3, 3-6, 1-6 ರಿಂದ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಹಾಲಿ ಚಾಂಪಿಯನ್ ಆಗಿದ್ದ ಸ್ವಿಯಾಟೆಕ್ ಅವರು ಒಸ್ಟಾಪೆಂಕೊ ವಿರುದ್ಧ ಉತ್ತಮ ಆರಂಭವನ್ನು ಪಡೆದರು, ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದರು ಆದರೆ ನಂತರದ ಎರಡು ಸೆಟ್ ಗಳಲ್ಲಿ ಸೋಲನುಭವಿಸಿದರು.
ಕಳೆದೆರಡು ವರ್ಷಗಳಿಂದ WTA ಟೂರ್ ನಲ್ಲಿ ಪ್ರಾಬಲ್ಯವನ್ನು ಸಾಧಿಸಿರುವ ಸ್ವಿಯಾಟೆಕ್ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದು ಭಾವಿಸಲಾಗಿತ್ತು. ಆದರೆ ಮೈದಾನದಲ್ಲಿ ಒಸ್ಟಾಪೆಂಕೊ ಅವರು ಪೋಲ್ಯಾಂಡ್ ಆಟಗಾರ್ತಿಗೆ ಸೋಲಿನ ರುಚಿ ಉಣಿಸಿದರು.
ವಾಸ್ತವವಾಗಿ, ಇಂದಿನ ಮುಖಾಮುಖಿಯ ಮೊದಲು, ಒಸ್ಟಾಪೆಂಕೊ ಅವರು ಸ್ವಿಯಾಟೆಕ್ ವಿರುದ್ದ ಆಡಿರುವ ಹಿಂದಿನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದ್ದರು.
Next Story