ಬಿಜೆಪಿಯಲ್ಲಿರುವುದೇ ನನಗೆ ದೊಡ್ಡ ಸ್ಥಾನಮಾನ: ಮಾಜಿ ಸಂಸದೆ ಸುಮಲತಾ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿರುವ ನನಗೆ ಯಾವುದೇ ಸ್ಥಾನಮಾನದ ಆಸೆ ಇಲ್ಲ, ಆಕಾಂಕ್ಷಿಯೂ ನಾನಲ್ಲ. ಬಿಜೆಪಿಯಲ್ಲಿ ಇರುವುದೇ ದೊಡ್ಡ ಸ್ಥಾನಮಾನ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರ ಸರಕಾರದ ಕೆಲಸಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ನನ್ನದಾಗಿದೆ ಎಂದರು.
ರಾಜ್ಯ ಸರಕಾರ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಸಂಕಷ್ಟಪಡುತ್ತಿದೆ. ಹಾಗಾಗಿ ಬಿಪಿಎಲ್ ಕಾರ್ಡ್ ಕಡಿತ ಸೇರಿದಂತೆ ಬಡಜನರಿಗೆ ನೀಡಿದ್ದ ಸವಲತ್ತುಗಳನ್ನು ಕಸಿಯುತ್ತಿದೆ. ವಕ್ಫ್ ಗಾಗಿ ರೈತರು, ಮಠ, ದೇವಸ್ಥಾನದ ಆಸ್ತಿ ಕಬಳಿಸುತ್ತಿದೆ ಎಂದು ಅವರು ಆರೋಪಿಸಿದರು.
Next Story