ಮುಡಾ ಪ್ರಕರಣ | ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆಯ ನಿರೀಕ್ಷೆ ಸಾಧ್ಯವಿಲ್ಲ : ಕುಮಾರಸ್ವಾಮಿ
ಮಂಡ್ಯ: "ಲೋಕಾಯುಕ್ತ ರಾಜ್ಯ ಸರಕಾರದ ಅಥವಾ ಸಿದ್ದರಾಮಯ್ಯ ಅವರ ಮರ್ಜಿಯಲ್ಲಿರುವುದರಿಂದ ಮೈಸೂರಿನ ಮುಡಾ ಹಗರಣದಲ್ಲಿ ನಿಷ್ಪಕ್ಷಪಾತ, ನ್ಯಾಯಯುತ ತನಿಖೆ ನಿರೀಕ್ಷೆ ಸಾಧ್ಯವಿಲ್ಲ" ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅಕ್ರಮ ಎಸಗಿದ್ದಾರೆ. ದೆಹಲಿಯಿಂದ ದೊಡ್ಡ ವಕೀಲರನ್ನು ಕರೆಸಿ ವಾದ ಮಂಡಿಸಿದರೂ ಏನು ಪ್ರಯೋಜನವಾಗಲಿಲ್ಲʼ ಎಂದು ಅವರು ವ್ಯಂಗ್ಯವಾಡಿದರು.
ʼಮುಡಾ ಹಗರಣ ಅತ್ಯಂತ ದೊಡ್ಡ ಹಗರಣ. ಸರಕಾರಿ ಭೂಮಿಯನ್ನು ಲಪಟಾಯಿಸಿದ್ದಾರೆ. ತಪ್ಪಿಸಿಕೊಳ್ಳಲು ಸಾಧ್ಯವಾಗದೆಂದು ಮತ್ತೆ ವಾಪಸ್ ಮಾಡಿದ್ದಾರೆ. ಅಂದರೆ, ತಾನು ಅಕ್ರಮವಾಗಿ ನಿವೇಶನ ಪಡೆದಿದ್ದೆ ಎಂಬುದನ್ನು ಸಿದ್ದರಾಮಯ್ಯ ಒಪ್ಪಿಕೊಂಡಂತಾಗಿದೆʼ ಎಂದು ಅವರು ಹೇಳಿದರು.
Next Story