ಮಂಡ್ಯ | ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಮೃತ್ಯು

ಮಂಡ್ಯ : ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದ ನಾರ್ತ್‍ಬ್ಯಾಂಕ್ ಬಳಿಯ ವಿಶ್ವೇಶ್ವರಯ್ಯ ನಾಲೆಗೆ ಹೊಂದಿಕೊಂಡಿರುವ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿರುವುದು ವರದಿಯಾಗಿದೆ.
ಮೃತರನ್ನು ಮೈಸೂರಿನ ಗೌಸಿಯಾ ನಗರದ ನಿವಾಸಿ ಇಮ್ರಾನ್ ಅವರ ಪುತ್ರಿ ಸೋನು(17), ಸಯ್ಯದ್ ನಾಸಿರ್ ಗೌಸ್ ಪುತ್ರ ಸಿದ್ದಿಕ್(9) ಹಾಗೂ ರಿಜ್ವಾನ್ ಅವರ ಪುತ್ರಿ ಸಿಮ್ರಾನ್(16) ಎಂದು ತಿಳಿದು ಬಂದಿದೆ.
ಮೃತ ಮಕ್ಕಳು ಸೋದರ ಸಂಬಂಧಿಗಳಾಗಿದ್ದು, ಪಾಂಡವಪುರ ತಾಲೂಕಿನ ಚಿಕ್ಕಯರಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಸಿದ್ದಿಕ್ ಕಾಲುಜಾರಿ ಬಿದ್ದಾಗ ರಕ್ಷಿಸಲು ಮುಂದಾದ ಸೋನು, ಸಿಮ್ರಾನ್ ಕೂಡ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story