ಮಂಗಳೂರು | ವಿಟಿಯು ವಾರ್ಷಿಕ ಘಟಿಕೋತ್ಸವದಲ್ಲಿ ಮಿಂಚಿದ ಬಿಐಟಿ ವಿದ್ಯಾರ್ಥಿಗಳು

ತಸ್ನಿಮ್ ಖಾಲಿದ್ - ಅಯ್ಶುತುಲ್ ಸಜೀನಾ
ಮಂಗಳೂರು: ಶನಿವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದಲ್ಲಿ ತಮ್ಮ ಸಾಧನೆಗಳ ಮೂಲಕ ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಎಂಟೆಕ್ ಸಿಎಸ್ಇ ಪದವೀಧರೆಯಾದ ತಸ್ನಿಮ್ ಖಾಲಿದ್, 9.43 ಸರಾಸರಿ ಅಂಕ(Cumulative Grade Point Average)ಗಳನ್ನು ಪಡೆಯುವ ಮೂಲಕ ಎಂಟನೆ ರ್ಯಾಂಕ್ ಗೆ ಭಾಜನರಾದರು. ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ತಸ್ನಿಮ್ ಖಾಲಿದ್ | ಅಯ್ಶುತುಲ್ ಸಜೀನಾ
ಮತ್ತೊಬ್ಬ ಎಂಟೆಕ್ ಸಿಎಸ್ಇ ಪದವೀಧರೆಯಾದ ಅಯ್ಶುತುಲ್ ಸಜೀನಾ, 9.53 ಸರಾಸರಿ ಅಂಕಗಳನ್ನು ಪಡೆಯುವ ಮೂಲಕ 5ನೇ ರ್ಯಾಂಕ್ ಸಾಧನೆಗೈದರು. ಆದರೆ, ಇತ್ತೀಚೆಗೆ ತಮ್ಮ ತಂದೆ ನಿಧನರಾಗಿದ್ದರಿಂದ, ಅವರು ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.
ಇಬ್ಬರೂ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿರುವ ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಡಳಿತ ಮಂಡಳಿ, ಅವರಿಬ್ಬರ ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವವನ್ನು ಪ್ರಶಂಸಿಸಿದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.