ಸಿಎಂ ಪತ್ನಿ ವಿರುದ್ಧ ದೂರು | ನಾಳೆ(ಅ.28) ವಿಚಾರಣೆಗೆ ಹಾಜರಾಗುಂತೆ ಆರ್ಟಿಐ ಕಾರ್ಯಕರ್ತ ಗಂಗರಾಜುಗೆ ಈಡಿ ನೋಟಿಸ್
ಸಾಂದರ್ಭಿಕ ಚಿತ್ರ(PTI)
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮ ನಿವೇಶನಗಳ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ(ಈ.ಡಿ) ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಆರ್ಟಿಐ ಕಾರ್ಯಕರ್ತ ಎನ್.ಗಂಗರಾಜುಗೆ ನೋಟಿಸ್ ನೀಡಿದ್ದಾರೆ.
ಸೋಮವಾರ(ಅ.28) ಬೆಂಗಳೂರಿನ ಈಡಿ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದಾರೆ. ಈ ಸಂಬಂಧ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಗಂಗರಾಜು ಅವರು, ʼಈಡಿ ವಿಚಾರಣೆಗೆ ನಾನು ಹೋಗಲಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕೇಳುವ ಪೂರಕ ದಾಖಲೆಗಳನ್ನು ಒದಗಿಸಲಿದ್ದೇನೆʼ ಎಂದು ಹೇಳಿದರು.
ಆರ್ಟಿಐ ಕಾರ್ಯಕರ್ತ ಎನ್.ಗಂಗರಾಜು ಅವರು ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಅವರು ಹೆಬ್ನಾಳಿನ ಕೈಗಾರಿಕಾ ಪ್ರದೇಶದಲ್ಲಿ 20 ಗುಂಟೆ ಜಮೀನನ್ನು 1.80 ಕೋಟಿ ರೂ. ನೀಡಿ ಖರೀದಿ ಮಾಡಿದ್ದರು. ಇದರ ಹಣದ ಮೂಲಪತ್ತೆ ಹಚ್ಚಬೇಕು ಎಂದು ಈಡಿಗೆ ದೂರು ನೀಡಿದ್ದರು.
ಈ ಸಂಬಂಧ ಎನ್.ಗಂಗರಾಜು ಅವರು ವಿಚಾರಣೆಗೆ ಆಗಮಿಸುವಂತೆ ಈ.ಡಿ ನೋಟಿಸ್ ನೀಡಿದ ಎಂದು ತಿಳಿದು ಬಂದಿದೆ.