ಎಸೆಸೆಲ್ಸಿ ಪರೀಕ್ಷೆಯ ವಿಷಯದಲ್ಲಿ ಕೋಮು ಬಣ್ಣ ಹಚ್ಚಿದ್ದ ಸೂಲಿಬೆಲೆ ಮೇಲೆ ಕ್ರಮ ಕೈಗೊಳ್ಳಲಾಗುವುದು : ಸಚಿವ ಮಧು ಬಂಗಾರಪ್ಪ
ಮೈಸೂರು: ಶಾಲಾ ಮಕ್ಕಳ ಪರೀಕ್ಷೆ ವಿಷಯದಲ್ಲೂ ಕೋಮು ಬಣ್ಣ ಹಚ್ಚುತ್ತಿರುವ ಚಕ್ರವರ್ತಿ ಸೂಲಿಬೆಲೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಎಸೆಸೆಲ್ಸಿ ಪರೀಕ್ಷೆ ಕೊನೆಯ ದಿನ ಶುಕ್ರವಾರ ಅಂದು ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ನಡೆಸುವ ಉದ್ದೇಶ ನಮಾಝ್ ಗಾಗಿಯೇ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾನೆ. ಈತ ಶಾಲಾ ಮಕ್ಕಳ ವಿಚಾರದಲ್ಲೂ ಕೋಮು ಬಣ್ಣ ಹಚ್ಚಲು ಮುಂದಾಗಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು.
ಎಸೆಸೆಲ್ಸಿ ಪರೀಕ್ಷೆ ಕೊನೆಯ ದಿನ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಅವರಿಗೂ ಕೆಲವು ಸೆಂಟರ್ ಗಳು ಎಸೆಸೆಲ್ಸಿ ಕೇಂದ್ರಗಳಲ್ಲೇ ಇತುತ್ತದೆ. ಹಾಗಾಗಿ ಎಸೆಸೆಲ್ಸಿ ಪರೀಕ್ಷೆಯ ಒಂದು ವಿಷಯವನ್ನು ಮಧ್ಯಾಹ್ನ ಮಾಡುತ್ತಿರುವುದಕ್ಕೆ ಆತ ಈ ರೀತಿಯ ಟ್ವೀಟ್ ಮಾಡುತ್ತಾನೆ ಎಂದರೆ ಆತನ ಮನಸ್ಥಿತಿ ಹೇಗಿರಬೇಡ?, ಇಂತಹವರಿಗೆ ತಕ್ಕ ಪಾಠವನ್ನು ನಮ್ಮ ಸರಕಾರ ಕಲಿಸುತ್ತದೆ ಎಂದು ಹೇಳಿದರು.
"ಚಕ್ರವರ್ತಿ ಸೂಲಿಬೆಲೆ ಕಳೆದ ವರ್ಷ ಪಠ್ಯ ಪುಸ್ತಕದ ವಿಚಾರದಲ್ಲಿ ಹಲವು ಪ್ರಮಾದಗಳನ್ನು ಮಾಡಿದ್ದರು. ಬಳಿಕ ನಾನು ಅದನ್ನು ಸರಿ ಮಾಡಿಸಿದೆ. ಭಾವನಾತ್ಮಕ ವಿಚಾರಗಳ ಮೇಲೆ ಚುನಾವಣೆ ಎದುರಿಸಬಹುದು ಎಂಬುದು ನಿಮ್ಮ ತಲೆಯಲ್ಲಿದ್ದರೆ ಅದು ಸಾಧ್ಯವಿಲ್ಲ" ಎಂದು ಲೇವಡಿ ಮಾಡಿದರು.
ಶಾಲಾ ಮಕ್ಕಳಿಂದ ಹಿಂದಿನ ಬಿಜೆಪಿ ಸರಕಾರವೇ 60 ರೂ. ಹಣ ಪಡೆಯುತಿತ್ತು. ನಾವು ಬಂದ ಮೇಲೆ 10 ರೂ ಕಡಿತ ಗೊಳಿಸಿ 50 ರೂ. ಗೆ ಇಳಿಸಿದ್ದೇವೆ. ಈ ಹಣದಿಂದ ಸರಕಾರದ ಖಜಾನೆ ತುಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು