ಬಸವಣ್ಣ ಅವರನ್ನು ಇನ್ನು ಮುಂದೆ ಜ್ಞಾನ ಭಂಡಾರಿ ಬಸವಣ್ಣ ಎನ್ನಬೇಕು: ಸಾಹಿತಿ ಕೆ.ಎಸ್ ಭಗವಾನ್
ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಗೌರವ ಸಲ್ಲಿಸಿರುವುದು ಹೆಮ್ಮೆ ಪಡಬೇಕಾದ ವಿಚಾರ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಬಸವಣ್ಣ ಅವರು ಜಾರಿಗೆ ತಂದ ವಿಷಯಗಳನ್ನು ಜನ ಜೀವನದಲ್ಲಿ ಮೂಡಿಸಬೇಕಿದೆ. ಬಸವಣ್ಣ ಅವರು ಹೇಳಿದ ಬಹುಪಾಲು ಸಂವಿಧಾನದಲ್ಲಿ ಅಡಕವಾಗಿದೆ. ಹಾಗಾಗಿ ನಮ್ಮ ಶ್ರೇಷ್ಠ ಗ್ರಂಥ ಸಂವಿಧಾನ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂವಿಧಾನದ ಆಶಯದಂತೆ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಗೌರವ ಸಲ್ಲಿಸಿದ್ದಾರೆ. ಅವರಿಗೆ ಸಂಪೂರ್ಣವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಬಸವಣ್ಣ ಅವರನ್ನು ಭಕ್ತ ಬಂಡಾರಿ ಬಸವಣ್ಣ ಎಂದು ಕರೆಯಬಾರದು. ಭಕ್ತಿ ಎಂದರೆ ಮೌಢ್ಯ ಕಂದಾಚಾರ ಆಗುತ್ತದೆ. ಹಾಗಾಗಿ ಬಸವಣ್ಣ ಅವರನ್ನು ಜ್ಞಾನ ಭಂಡಾರಿ ಬಸವಣ್ಣ ಎನ್ನುವುದನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.