ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಆತುರದ ನಿರ್ಧಾರ ಕೈಗೊಂಡರು: ವಿ.ಸೋಮಣ್ಣ
Photo : x/@VSOMANNA_BJP
ಮೈಸೂರು, ಅ.29: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಆತುರದ ನಿರ್ಧಾರ ಕೈಗೊಂಡರು, ಉಪ ಚುನಾವಣೆ ಮೂಲಕ ಅಲ್ಲಿನ ಜನ ಎಚ್ಚರಿಕೆಯ ಗಂಟೆ ಬಾರಿಸಲಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಆತುರದ ನಿರ್ಧಾರ ಕೈಗೊಂಡರು ಅನಿಸುತ್ತಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್.ಡಿಎ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಎಂಟ್ರಿಯಾಗಿರುವುದರಿಂದ ತಾರ್ಕಿಕ ಅಂತ್ಯ ಕಾಣಲಿದೆ. ಮುಡಾದಲ್ಲಿ ನಡೆದಿರುವ ಅಕ್ರಮಗಳೆಲ್ಲಾ ಕ್ಲೀನ್ ಆಗಲಿದೆ ಎಂದರು.
ಭೈರತಿ ಸುರೇಶ್ ಸಚಿವ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪುಟವಿಟ್ಟ ಚಿನ್ನ ಇದ್ದಂತೆ. ಶೋಭಾ ಕರಂದ್ಲಾಜೆ ಬಗ್ಗೆ ಕೀಳಾಗಿ ಮಾತನಾಡಬೇಡಿ. ಇಂತಹ ಕೀಳು ಹೇಳಿಕೆಗಳು ಸಚಿವ ಭೈರತಿ ಸುರೇಶ್ ಅವರ ಘನತೆಗೆ ತಕ್ಕುದಲ್ಲ ಎಂದು ಹೇಳಿದರು.