ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ ಬಿಟ್ಟರೆ ಶಾಸಕ ಜಿ.ಟಿ.ದೇವೇಗೌಡ ಅವರೇ ದೊಡ್ಡವರು: ಸಾ.ರಾ. ಮಹೇಶ್
"ಅವರ ಜೊತೆ ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ"
ಸಾ.ರಾ. ಮಹೇಶ್
ಮೈಸೂರು: ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ನಮ್ಮ ನಾಯಕರು. ಒಂದು ಮನೆಯಲ್ಲಿ ಸಣ್ಣ ಪುಟ್ಟ ಜಗಳ ಬರುತ್ತದೆ ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ ಬಿಟ್ಟರೆ ಜಿ.ಟಿ.ದೇವೇಗೌಡ ಅವರೇ ದೊಡ್ಡವರು. ಅವರ ನೇತೃತ್ವದಲ್ಲೇ ಜೆಡಿಎಸ್ ಕಾರ್ಯಕರ್ತರ ಸಭೆ ನಾಳೆ ನಡೆಯಲಿದೆ. ಅವರೇ ಜೆಡಿಎಸ್ ಪಕ್ಷದ ಸಭೆಗೆ ನನ್ನನ್ನು ಕರೆಯಬೇಕು ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡರ ಜೊತೆ ನಾನು ಚೆನ್ನಾಗಿಯೇ ಇದ್ದೇನೆ. ಅವರ ಜೊತೆ ಯಾವಾಗಲೂ ಮಾತನಾಡುತ್ತೇನೆ. ಅವರ ಜನ್ಮದಿನದ ಸಂದರ್ಭದಲ್ಲೂ ಅವರಿಗೆ ದೂರವಾಣಿ ಮೂಲಕ ಶುಭಾಶಯ ಕೋರಿದ್ದೇನೆ. ಅವರ ಜೊತೆ ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Next Story