ಸಿಎಂ ಕುರ್ಚಿಗಾಗಿ ಯಾವುದೇ ರೇಸ್ ನಡೆಯುತ್ತಿಲ್ಲ, ಸಿದ್ದರಾಮಯ್ಯ ಗಟ್ಟಿಯಾಗಿ ಕುಳಿತಿದ್ದಾರೆ : ಎಚ್.ಸಿ.ಮಹದೇವಪ್ಪ
ಎಚ್.ಸಿ.ಮಹದೇವಪ್ಪ
ಮೈಸೂರು: ʼಸಿದ್ದರಾಮಯ್ಯ ಸಿಎಂ ಕುರ್ಚಿ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ. ಸಿಎಂ ಕುರ್ಚಿಗಾಗಿ ಯಾವುದೇ ರೇಸ್ ನಡೆಯುತ್ತಿಲ್ಲʼ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಐದು ವರ್ಷವೂ ಈ ಸರಕಾರ ಗಟ್ಟಿಯಾಗಿರುತ್ತದೆ. ಸಿದ್ದರಾಮಯ್ಯ ಸಿಎಂ ಕುರ್ಚಿಯ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ. ಮುಂದೆಯೂ ಅವರು ಕುಳಿತಿರುತ್ತಾರೆ. ಇದರಲ್ಲಿ ಅಲುಗಾಡುತ್ತಿದೆ, ಖಾಲಿಯಾಗುತ್ತಿದೆ ಎಂಬ ಯಾವ ಚರ್ಚೆಯೂ ಬೇಡ. ಸಿಎಂ ಕುರ್ಚಿಗಾಗಿ ರೇಸ್ ನಡೆಯುತ್ತಿಲ್ಲ. ರೇಸ್ ನಡೆಯದ ಮೇಲೆ ಆಕಾಂಕ್ಷಿಗಳ ಪ್ರಶ್ನೆಯೇ ಬರುವುದಿಲ್ಲ. 2028ಕ್ಕೂ ನಮ್ಮದೇ ಸರಕಾರ ಬರುತ್ತದೆ. ಆಗ ಬೇಕಾದರೆ ರೇಸಿನ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಆ ರೀತಿಯ ಯಾವ ಪ್ರಶ್ನೆಗಳು ಇಲ್ಲʼ ಎಂದರು.
ʼವಿಪಕ್ಷಗಳಿಗೆ ಸಂವಿಧಾನಿಕವಾಗಿ ಕೆಲಸ ಮಾಡಲು ಯಾವ ವಿಚಾರ ಇಲ್ಲ. ವಿಪಕ್ಷಗಳು ತಮ್ಮ ಹುದ್ದೆ ನಿರ್ವಹಿಸುವಲ್ಲಿ ಸೋತಿವೆ. ವಿಪಕ್ಷಗಳಿಗೆ ರಾಜಕೀಯ ಜವಾಬ್ದಾರಿ, ಪ್ರಬುದ್ದತೆ ಎರಡೂ ಇಲ್ಲʼ ಎಂದು ಟೀಕಿಸಿದರು.