ಯಾವಾಗ ಏನಾಗುತ್ತೋ ಗೊತ್ತಿಲ್ಲ: ಅಚ್ಚರಿ ಹೇಳಿಕೆ ನೀಡಿದ ಗೃಹ ಸಚಿವ
ಜಿ.ಪರಮೇಶ್ವರ್
ಮೈಸೂರು : ಮುಂಬರುವ ದಿನಗಳಲ್ಲಿ ರಾಜಕೀಯ ಪರಿಸ್ಥಿತಿ ಏನಾಗುತ್ತೋ ಗೊತ್ತಿಲ್ಲ. ಸಿದ್ಧರಾಮಯ್ಯ ಅವರ ಅಧಿಕಾರ ಅವಧಿ ಇರುವವರಗೆ ನಮ್ಮ ಸರಕಾರ ಇರುವವರೆಗೆ ಮೈಸೂರು ನಗರದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಸಿಎಂ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
15 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮೈಸೂರು ಶೈಲಿಯಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ಅದಕ್ಕೆ ಸಾಧ್ಯವಾದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಿ. ಮುಂದೆ ಏನು ಹೇಳಲು ಆಗಲ್ಲ. ಯಾವಾಗ ಏನೇನು ಆಗುತ್ತದೋ ಗೊತ್ತಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ರಾಜ್ಯದ ಮೂರು ಕ್ಷೇತ್ರದಲ್ಲೂ ಗೆಲುವು :
ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗಿರುವ ಮಾಹಿತಿ ಪ್ರಕಾರ ಜಯ ಸಾಧಿಸಲಿದ್ದೇವೆ ಎಂದರು.
ಎಕ್ಸಿಟ್ ಪೋಲ್ ಎಲ್ಲಾ ಸಂದರ್ಭದಲ್ಲೂ ನಿಜವಲ್ಲ. ನಾನು ಮಹಾರಾಷ್ಟ್ರ ಉಸ್ತುವಾರಿ ವಹಿಸಿದ್ದೆ. ಅಲ್ಲಿ ಬೇರೆಯೇ ವಾತಾವರಣವಿದೆ. ಕೆಲ ಸರ್ವೆಗಳು ಒಕ್ಕೂಟಕ್ಕೂ ಬಹುಮತ ಬರುವ ವರದಿ ನೀಡಿವೆ. ಮಹಾರಾಷ್ಟ್ರದಲ್ಲಿ ನಮ್ಮ ಒಕ್ಕೂಟಕ್ಕೆ ಗೆಲುವು ಸಿಗುವ ವಿಶ್ವಾಸವಿದೆ ಎಂದರು.