ಮೈಸೂರು : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ, ಮರಿಗಳು
ಮೈಸೂರು : ಮೈಸೂರು ತಾಲ್ಲೂಕಿನ ಮಾರಶೆಟ್ಟಹಳ್ಳಿ ಗ್ರಾಮದ ಸುತ್ತ ಮುತ್ತ ಚಿರತೆಗಳು ಹೆಚ್ಚಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಗ್ರಾಮದ ಬಸವಣ್ಣ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುವ ಸಂದರ್ಭದಲ್ಲಿ ಮೂರು ಚಿರತೆ ಮರಿಗಳು ಸೆರೆಯಾಗಿವೆ.
ಅರಣ್ಯ ಇಲಾಖೆ ಅಧಿಕಾರಿಗಳು ಬಸವಣ್ಣ ಅವರ ಜಮೀನಿನಲ್ಲಿ ಬೋನ್ ಇಟ್ಟು ಇದರ ಮರಿಗಳನ್ನು ಬೋನಿನೊಳಗೆ ಬಿಡಲಾಗಿತ್ತು. ತನ್ನ ಮರಿಗಳನ್ನು ನೋಡಲು ಬಂದ ತಾಯಿ ಚಿರತೆ ಕೂಡ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ತಾಯಿ ಚಿರತೆ ಮತ್ತು ಮರಿಗಳನ್ನು ತಮ್ಮ ವಶಕ್ಕೆ ಪಡೆದು ಕಾಡಿಗೆ ಬಿಡಲು ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
Next Story