ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ತಲೆತಗ್ಗಿಸುವ ಘಟನೆ : ಆರ್.ಅಶೋಕ್
"ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ"

ಆರ್.ಅಶೋಕ್
ಮೈಸೂರು : ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ತಲೆತಗ್ಗಿಸುವ ಘಟನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಮಂಗಳವಾರ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯವಾಗಿದೆ. ಮೂಟೆಗಟ್ಟಲೆ ಕಲ್ಲುಗಳು ಎಲ್ಲಿಂದ ಬಂದವು? ಪೊಲೀಸ್ ಆಯುಕ್ತರು ಸ್ಥಳಕ್ಕೆ ಬರದಿದ್ದರೆ ಇಷ್ಟರಲ್ಲಿ ಪೊಲೀಸ್ ಠಾಣೆ ಹಾಳು ಕೊಂಪೆಯಾಗಿರುತ್ತಿತ್ತು ಎಂದರು.
ನನಗಿರುವ ಮಾಹಿತಿ ಪ್ರಕಾರ ಜಿ.ಪರಮೇಶ್ವರ್ ಅವರಿಗೆ ಗೃಹಮಂತ್ರಿ ಖಾತೆ ಇಷ್ಟವಿಲ್ಲ. ಬಲವಂತವಾಗಿ ಹೇರಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ನಿದ್ದೆರಾಮಯ್ಯ ಆಗುವುದನ್ನು ಬಿಟ್ಟು ಜನರ ಕಡೆ ಗಮನಕೊಡಬೇಕು.ಈವರೆಗೂ ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದರು.
Next Story