ಮಹಿಷ ದಸರಾ ವಿರೋಧಿಸಿದ್ದಕ್ಕಾಗಿ ಯಾರೊ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು: ಸಂಸದ ಪ್ರತಾಪ್ ಸಿಂಹ
ಮೈಸೂರು: ರಾಮಲಲ್ಲಾ ಮೂರ್ತಿಗೆ ಶಿಲೆ ಸಿಕ್ಕ ಸ್ಥಳದಲ್ಲಿ ನಡೆಯುತ್ತಿದ್ದ ಭೂಮಿ ಪೂಜಾ ಕಾರ್ಯಕ್ಕೆ ಆಗಮಿಸಿದ್ದ ವೇಳೆ ತಮಗೆ ಪೂಜಾ ಸ್ಥಳಕ್ಕೆ ಹೋಗದಂತೆ ಘೇರಾವ್ ಹಾಕಿ ಗಲಾಟೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸೋಮವಾರ ಮೈಸೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾನು ಈ ಕ್ಷಣಕ್ಕೂ ಮಹಿಷ ದಸರಾ ವಿರೋಧಿ. ಮಹಿಷಾ ದಸರಾ ವಿರೋಧ ಮಾಡಿದ್ದಕ್ಕೆ ಯಾರೋ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು. ಕಾಂಗ್ರೆಸ್ ನ ಪುಡಾರಿಗಳಿಂದ ಗಲಾಟೆ ನಡೆದಿದೆ. ಮತ್ತೆ ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ ಅಷ್ಟೆ. ಆದರೆ ಚಾಮುಂಡಿ ತಾಯಿಯ ಭಕ್ತರು ಕೋಟ್ಯಾಂತರ ಜನ ಇದ್ದಾರೆ. ನಾನು ಚಾಮುಂಡಿಯ ಭಕ್ತ ಎಂದರು.
ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೆನೋ ನಡೆಯುತ್ತೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
Next Story