ಮೈಸೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೈಯದ್ ಅಬ್ರಾರ್ ಆಯ್ಕೆ

ಮೈಸೂರು : ಮೈಸೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೈಯದ್ ಅಬ್ರಾರ್ ಆಯ್ಕೆಯಾಗಿದ್ದಾರೆ.
ಸೆಪ್ಟಂಬರ್ 2024ರಂದು ನಡೆದಿದ್ದ ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ಚುನಾವಣೆಯ ಫಲಿತಾಂಶ 2025ರ ಫೆಬ್ರವರಿ 7 ರಂದು ಪ್ರಕಟವಾಗಿದೆ.
ಚುನಾವಣೆಯಲ್ಲಿ ಮೈಸೂರು ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೈಯದ್ ಅಬ್ರಾರ್ ರವರು 9,263 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಎರಡನೇ ಬಾರಿಗೂ ಇವರೇ ಆಯ್ಕೆಯಾಗಿರುವುದು ಇವರ ಸಂಘಟನೆ ಹಾಗೂ ಪಕ್ಷ ನಿಷ್ಠೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಸಹಕಾರವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ನಗರ ವ್ಯಾಪ್ತಿಯ ಮೂರು ಕ್ಷೇತ್ರಗಳಲ್ಲಿಯೂ ಮತ್ತಷ್ಟು ಸಂಘಟನೆ ಕೈಗೊಳ್ಳಲಿ ಎಂದು ಮುಖಂಡರುಗಳು ಹಾರೈಸಿದ್ದಾರೆ.
Next Story