ರಾಷ್ಟ್ರಕಂಡ ಸಾಮಾಜಿಕ ಚಿಂತನೆಯ ಹಿರಿಯ ನಾಯಕ ಅಸ್ಥಂಗತ : ವಿ.ಶ್ರೀನಿವಾಸಪ್ರಸಾದ್ ನಿಧನಕ್ಕೆ ಕಂಬನಿ ಮಿಡಿದ ಸ್ಪೀಕರ್ ಯು.ಟಿ.ಖಾದರ್
ಮೈಸೂರು : ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಚಾಮರಾಜ ನಗರ ಲೋಕಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್(76) ಇಂದು(ಎ.29) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಶೋಕಪುರಂ ಸರ್ಕಾರಿ ಶಾಲೆಯಲ್ಲಿ ಸೋಮವಾರ ವಿ.ಶ್ರೀನಿವಾಸಪ್ರಸಾದ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್, " ರಾಷ್ಟ್ರಕಂಡ ಸಾಮಾಜಿಕ ಚಿಂತನೆಯ ಹಿರಿಯ ನಾಯಕ ಸೂರ್ಯ ಇಂದು ಅಸ್ಥಂಗತವಾಗಿದೆ. 1980 ರ ಕಾಲದಿಂದಲೂ ಶೋಷಿತರ ಪರ ಧನಿಯಾಗಿ ಸಂವಿಧಾನ ಕೊಟ್ಟ ಹಕ್ಕನ್ನು ಪಡೆಯಲು ಪ್ರೇರಣೆಯಾಗಿದ್ದವರು. ಸಮಾಜದ ಕಟ್ಟಕಡೆಯ ಧನಿಯಾಗಿ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲಾ ರಾಜಕಾರಣಿಗಳಿಗೆ ಸಂವಿಧಾನದ ಅಡಿಯಲ್ಲಿ ಹೇಗೆ ಕಲಸ ಮಾಡಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ಅವರ ಚಿಂತನೆ, ರಾಜಕೀಯ ಹೋರಾಟ ಎಲ್ಲರಿಗೂ ಪ್ರೇರಣೆಯಾಗಬೇಕು" ಎಂದು ವಿ.ಶ್ರೀನಿವಾಸಪ್ರಸಾದ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ʼಅವರ ರಾಜಕೀಯ ಜೀವನವೇ ಇಂದಿನ ಕಿರಿಯ ರಾಜಕಾರಣಿಗೆ ಪಾಠವಾಗಿದೆ. ಎಲ್ಲಾ ಜನರಿಗೆ ಅವರು ಮಾದರಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಈ ದುಃಖವನ್ನು ತಡೆದುಕೊಳ್ಳಲು ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಹೇಳಿದರು.