ಮುಂದೂಡಲ್ಪಟ್ಟಿದ್ದ ನೀಟ್-ಪಿಜಿ ಪರೀಕ್ಷೆಗೆ ದಿನಾಂಕ ಘೋಷಣೆ
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನೀಟ್-ಪಿಜಿ ಪರೀಕ್ಷೆಯ ದಿನಾಂಕವನ್ನು ಘೋಷಿಸಿದೆ. ಸ್ನಾತ್ತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗಾಗಿ ಈ ಪರೀಕ್ಷೆಯನ್ನು ಆಗಸ್ಟ್ 11ರಂದು ಎರಡು ಶಿಫ್ಟ್ಗಳಲ್ಲಿ ನಡೆಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಈ ಹಿಂದೆ ಈ ಪರೀಕ್ಷೆ ಜೂನ್ 22ರಂದು ನಡೆಯಬೇಕಿದ್ದರೂ ನೀಟ್-ಯುಜಿ ಫಲಿತಾಂಶ ಪ್ರಕಟಗೊಂಡ ನಂತರ ಕೇಳಿ ಬಂದ ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಪರೀಕ್ಷಾ ಅವ್ಯವಹಾರ ಆರೋಪಗಳ ಕುರಿತಂತೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸರ್ಕಾರದ ಸೈಬರ್ ಅಪರಾಧ ನಿಗ್ರಹ ಸಂಸ್ಥೆಯೊಂದಿಗೆ ಮಾತುಕತೆಗಳನ್ನು ನಡೆಸಿದ ನಂತರ ನೀಟ್-ಪಿಜಿ ಪರೀಕ್ಷೆಯ ಹೊಸ ದಿನಾಂಕ ಘೋಷಣೆಯಾಗಿದೆ.
ಪರೀಕ್ಷೆಗಿಂತ ಎರಡು ಗಂಟೆ ಮೊದಲು ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು ಮುಂತಾದ ಸಲಹೆಗಳನ್ನು ಸಭೆಯ ಮುಂದಿಡಲಾಗಿದೆ ಎಂಬ ಮಾಹಿತಿಯಿದೆ.
Next Story