ಚಂದ್ರಯಾನ-3: ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದ ವಿಕ್ರಂ ಲ್ಯಾಂಡರ್
ಮೊದಲ ಡಿಬೂಸ್ಟಿಂಗ್ ಆಪರೇಷನ್ ಯಶಸ್ವಿ
Photo credit: ISRO
ಹೊಸದಿಲ್ಲಿ: ಆಗಸ್ಟ್ 23ರಂದು ಚಂದಿರನ ಅಂಗಳಕ್ಕೆ ಕಾಲಿಡಲಿದೆ ಎಂದು ನಿರೀಕ್ಷಿಸಲಾದ ಭಾರತದ ವಿಕ್ರಂ ಲ್ಯಾಂಡರ್ ಇಂದು ಈ ಐತಿಹಾಸಿಕ ಕ್ಷಣಕ್ಕೂ ಮುನ್ನ ನಡೆಸಲಾಗುವ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ.
ಇಂದು ವಿಕ್ರಂ ಲ್ಯಾಂಡರ್ ತನ್ನ ಮೊದಲ ಡಿಬೂಸ್ಟಿಂಗ್ ಆಪರೇಷನ್ಗೆ ಒಳಗಾಯಿತು. ಈ ಪ್ರಕ್ರಿಯೆಯು ಚಂದ್ರನ ಹತ್ತಿರದ ಕಕ್ಷೆಗೆ ಅದನ್ನು ಸೇರಿಸಲು ಅದನ್ನು ನಿಧಾನಗೊಳಿಸಿದೆ.
ಇಸ್ರೋ ನೀಡಿದ ಮಾಹಿತಿಯ ಪ್ರಕಾರ ಲ್ಯಾಂಡರ್ ಮೊಡ್ಯೂಲ್ನ ಸ್ಥಿತಿ ಸಹಜವಾಗಿದ್ದು ಹಾಗೂ ಇಂದು ಕೈಗೊಳ್ಳಲಾದ ಮಹತ್ವದ ಹೆಜ್ಜೆ ಯಶಸ್ವಿಯಾಗಿದೆ.
ಇಂದಿನ ಡಿಬೂಸ್ಟರ್ ಆಪರೇಷನ್ ಲ್ಯಾಂಡರ್ ಮೊಡ್ಯೂಲ್ನ ಕಕ್ಷೆಯನ್ನು 113 ಕಿಮೀ x 157 ಕಿಮೀಗೆ ಕಡಿಮೆಗೊಳಿಸಿದೆ. ಇಂತಹ ಎರಡನೇ ಪ್ರಕ್ರಿಯೆ ಆಗಸ್ಟ್ 20ರಂದು ನಡೆಯಲಿದೆ ಎಂದು ಇಸ್ರೋ ಹೇಳಿದೆ.
ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ನಿರೀಕ್ಷೆಯಂತೆ ಆಗಸ್ಟ್ 23ರಂದು ಕಾಲಿಟ್ಟರೆ, ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರ ಭಾರತ ಆಗಲಿದೆ.
Next Story