Fact Check | ಪ್ರಧಾನಿ ಮೋದಿ 2023ರಲ್ಲಿ ವಾರಣಾಸಿಯ ಶಾಲೆಗೆ ಭೇಟಿ ನೀಡಿದ್ದ ವೀಡಿಯೊವನ್ನು ದಿಲ್ಲಿಯದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
PC : PTI
ಹೊಸದಿಲ್ಲಿ: ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು,ಇದು ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿಯಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿರ್ಮಿಸಿದ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದ್ದು ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಮೋದಿಯವರು ತರಗತಿ ಕೋಣೆಯಲ್ಲಿ ಮಕ್ಕಳೊಂದಿಗೆ ಸಂವಾದ ನಿರತರಾಗಿದ್ದನ್ನು ವೀಡಿಯೊ ತೋರಿಸಿದೆ. ಆದರೆ ಈ ವೀಡಿಯೊ ಮೋದಿಯವರು 2023ರಲ್ಲಿ ವಾರಣಾಸಿಯ ಶಾಲೆಯೊಂದಕ್ಕೆ ನೀಡಿದ್ದ ಭೇಟಿಯದಾಗಿದೆ ಎನ್ನುವುದನ್ನು ಪಿಟಿಐ ಫ್ಯಾಕ್ಟ್ ಚೆಕ್ ಡೆಸ್ಕ್ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ಎರಡು ವರ್ಷಗಳ ಹಳೆಯ ವೀಡಿಯೊವನ್ನು ಇತ್ತೀಚಿನದೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.
ಫೆ.5ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ದಿಲ್ಲಿಯಲ್ಲಿ ರಾಜಕೀಯ ಪಕ್ಷಗಳ ಅಬ್ಬರದ ನಡುವೆ ವೈರಲ್ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತನ್ನ ಶಿಕ್ಷಣ ಮಾದರಿಯನ್ನು ಪ್ರಚಾರದ ಕೇಂದ್ರಬಿಂದುವನ್ನಾಗಿಸಿರುವ ಆಪ್,ರಾಷ್ಟ್ರ ರಾಜಧಾನಿಯಲ್ಲಿ ವಿಶ್ವದರ್ಜೆಯ ಶಾಲೆಗಳನ್ನು ನಿರ್ಮಿಸಿರುವುದಾಗಿ ಹೇಳಿಕೊಳ್ಳುತ್ತಿದೆ.
(PC : PTI)
(PC : PTI)
ಫೇಸ್ಬುಕ್ ಬಳಕೆದಾರನೋರ್ವ ಜ.10ರಂದು ವೀಡಿಯೊವನ್ನು ಪೋಸ್ಟ್ ಮಾಡಿ,ಕೇಜ್ರಿವಾಲ್ ನಿರ್ಮಿಸಿದ ಶಾಲೆಗೆ ಮೋದಿ ಭೇಟಿ ಸಂದರ್ಭದ್ದಾಗಿದೆ ಎಂದು ಹೇಳಿದ್ದ.
(PC : PTI)
ಇನ್ವಿಡ್ ಟೂಲ್ ಸರ್ಚ್ ಮತ್ತು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದ ಪಿಟಿಐ ಇಂತಹುದೇ ಹೇಳಿಕೆಯೊಂದಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಇಂತಹುದೇ ವೀಡಿಯೊವನ್ನು ಪತ್ತೆ ಹಚ್ಚಿತ್ತು. ಇನ್ನಷ್ಟು ಹುಡುಕಾಟ ನಡೆಸಿದಾಗ ಒಂದು ವರ್ಷದ ಹಿಂದೆ ಮೋದಿಯವರ ಅಧಿಕೃತ ಯೂ ಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾಗಿದ್ದ ವೀಡಿಯೊವೊಂದು ಕಂಡು ಬಂದಿತ್ತು. ಈ ವೀಡಿಯೊ ಈಗ ವೈರಲ್ ಆಗಿರುವ ಕ್ಲಿಪ್ನೊಂದಿಗೆ ಬಹಳಷ್ಟು ಸಾಮ್ಯಗಳನ್ನು ಹೊಂದಿದೆ. ‘ಪಿಎಂ ಮೋದಿ ವಾರಣಾಸಿಯ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದಾರೆ ’ಎಂಬ ಅಡಿಬರಹವನ್ನು ಈ ವೀಡಿಯೊ ಹೊಂದಿದೆ.
ಅಸಲಿಗೆ ಮೋದಿ ದಿಲ್ಲಿಯ ಶಾಲೆಗೆ ಭೇಟಿಯನ್ನೇ ನೀಡಿರಲಿಲ್ಲ,ವೈರಲ್ ಆಗಿರುವ ವೀಡಿಯೊವನ್ನು ಡಿಸೆಂಬರ್,2023ರ ಈ ವೀಡಿಯೊದಿಂದ ಸೃಷ್ಟಿಸಲಾಗಿದೆ ಎನ್ನುವುದು ತನಿಖೆಯಿಂದ ಬಯಲಾಗಿದೆ.
(PC : PTI)
(PC : PTI)
ಈ ಲೇಖನವನ್ನು ಮೊದಲು ptinews.com ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.