ಕೂದಲೆಳೆ ಅಂತರದಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿಯುವುದರಿಂದ ವಂಚಿತನಾದ 16ರ ಅಥ್ಲೀಟ್!
PC: x.com/Sports_NDTV
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕ್ವೀನ್ಸ್ ಲ್ಯಾಂಡ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 16 ವರ್ಷ ವಯಸ್ಸಿನ ವೇಗದ ಓಟಗಾರ ಗೌತ್ ಗೌತ್ 100 ಮೀಟರ್ ಓಟವನ್ನು ಕೇವಲ 10.2 ಸೆಕೆಂಡ್ ಗಳಲ್ಲಿ ಓಡಿ ಅಚ್ಚರಿ ಮೂಡಿಸಿದ್ದಾನೆ.
ಸುಡಾನ್ ಮೂಲದ ಪೋಷಕರ ಪುತ್ರನಾಗಿ ಆಸ್ಟ್ರೇಲಿಯಾದಲ್ಲಿ ಜನಿಸಿದ ಗೌತ್, ತಮ್ಮ 40 ಮೀಟರ್ ಗೆರೆಯನ್ನು ಇತರ ಸಹ ಓಟಗಾರರ ಜತೆಗೇ ಪೂರ್ಣಗೊಳಿಸಿದ. ಆದರೆ ದ್ವಿತೀಯ ಸ್ಥಾನ ಪಡೆದ ಸಹ ಓಟಗಾರನಿಗಿಂತ ಕನಿಷ್ಠ 10 ಯಾರ್ಡ್ ಅಂತರದಲ್ಲಿ ಸ್ಪರ್ಧೆಯಲ್ಲಿ ಗೆದ್ದ. ಅಂದರೆ ಉಳಿದ 60 ಮೀಟರ್ ಅಂತರವನ್ನು ಕಣ್ತೆರೆಯುವುದರೊಳಗೆ ಮುಕ್ತಾಯಗೊಳಿಸಿ ಅಚ್ಚರಿ ಮೂಡಿಸಿದ್ದಾನೆ. ಈ ನಂಬಲಸಾಧ್ಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಬೆರಗಾಗಿದ್ದಾರೆ.
ಈತ 200 ಮೀಟರ್ ಓಟವನ್ನು ಕೇವಲ 20.69 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದು, ಇನ್ನೂ ಉನ್ನತ ಹಾಗೂ ಕ್ಷಿಪ್ರ ಸಾಧನೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಆತ ಓಡಿದ ರೀತಿ ಹಾಗೂ ಎದುರಾಳಿಗಳನ್ನು ಹಿಂದಿಕ್ಕಿದ ರೀತಿ ನಿಜಕ್ಕೂ ದಂತಕಥೆ. ಉಸೈನ್ ಬೋಲ್ಟ್" ಎಂದು ಮತ್ತೊಬ್ಬ ಅಭಿಮಾನಿ ಬಣ್ಣಿಸಿದ್ದಾರೆ.
ಬಹುಶಃ ಆತನಿಗೆ ಬ್ರೇಕ್ ಇಲ್ಲ ಎಂದು ಮತ್ತೊಬ್ಬ ಅಭಿಮಾನಿ ಹಾಸ್ಯಚಟಾಕಿ ಹಾರಿಸಿದ್ದಾರೆ.
ಇತ್ತೀಚೆಗೆ ಬ್ರಿಸ್ಪೇನ್ ನಲ್ಲಿ ನಡೆದ ಆಸ್ಟ್ರೇಲಿಯನ್ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಗೌತ್ 18 ವರ್ಷ ವಯೋಮಿತಿಯ 200 ಮೀಟರ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಾನೆ. 20.89 ಸೆಕೆಂಡ್ ಗಳಲ್ಲಿ ಓಟ ಪೂರ್ಣಗೊಳಿಸಿದ್ದು, ಇದು ಎಂಟು ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಈ ವಯಸ್ಸಿನಲ್ಲಿ ಸಾಧಿಸಿದ್ದ ಸಮಯಕ್ಕಿಂತ 0.30 ಸೆಕೆಂಡ್ ಗಳಷ್ಟು ಕಡಿಮೆ.