ಕೋಚಿಂಗ್ ಕ್ಲಾಸಿನಲ್ಲಿ ಕುಸಿದು ಬಿದ್ದು ಮೃತಪಟ್ಟ ವಿದ್ಯಾರ್ಥಿ
Photo: NDTV
ಇಂದೋರ್: ಮಧ್ಯ ಪ್ರದೇಶದ ಇಂದೋರ್ನಲ್ಲಿ ಕೋಚಿಂಗ್ ತರಗತಿಯಲ್ಲಿ 18 ವರ್ಷದ ವಿದ್ಯಾರ್ಥಿಯೊಬ್ಬ ದಿಢೀರ್ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ಬುಧವಾರ ಸಂಜೆ ನಡೆದಿದೆ.
ನಗರದ ಭನ್ವರ್ಕುವನ್ ಪ್ರದೇಶದ ನಿವಾಸಿ ಮಾಧವ್ ಎಂಬವರು ಮಧ್ಯ ಪ್ರದೇಶ ಲೋಕಸೇವಾ ಆಯೋಗದ ಪ್ರವೇಶ ಪರೀಕ್ಷೆಗಾಗಿ ನಗರದ ಕೋಚಿಂಗ್ ಸೆಂಟರ್ ಒಂದರಲ್ಲಿ ತರಬೇತಿ ಪಡೆಯುತ್ತಿದ್ದರು. ತರಗತಿ ನಡೆಯುತ್ತಿರುವಾಗಲೇ ಆತನಿಗೆ ಎದೆ ನೋವು ಕಾಣಿಸಿಕೊಂಡಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಾಠವನ್ನು ಆಲಿಸುತ್ತಿರುವಾಗಲೇ ಮಾಧವ್ ಗೆ ದಿಢೀರ್ ಎದೆ ನೋವು ಪ್ರಾರಂಭವಾಗಿದೆ. ಅವರ ಹಿಂದೆ ಕುಳಿತಿದ್ದ ಇನ್ನೊಬ್ಬರು ಕೂಡಲೇ ಆತನ ಬೆನ್ನು ನೇವರಿಸಿದ್ದಾರೆ. ಆದರೆ ತೀವ್ರ ನೋವಿನಲ್ಲಿದ್ದ ಮಾಧವ್ ತಕ್ಷಣ ಕುಸಿದು ಬಿದ್ದಿದ್ದಾರೆ. ಘಟನೆಯಿಂದ ಒಮ್ಮೆಲೇ ಆಘಾತಗೊಂಡ ತರಗತಿಯಲ್ಲಿದ್ದವರೆಲ್ಲರೂ ತಕ್ಷಣ ಮಾಧವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರೂ ಕೆಲವೇ ಗಂಟೆಗಳಲ್ಲಿ ಆತ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಇಂದೋರ್ನಲ್ಲಿ ಕಳೆದ ಕೆಲ ವಾರಗಳ ಅವಧಿಯಲ್ಲಿ ಈ ರೀತಿಯ ಹೃದಯಾಘಾತಕ್ಕೆ ಕನಿಷ್ಠ ನಾಲ್ಕು ಜೀವಗಳು ಬಲಿಯಾಗಿವೆ.
Tragic news from #Indore
— Nabila Jamal (@nabilajamal_) January 18, 2024
MPPSC aspirant dies from fatal heart attack during coaching class. CCTV footage from classroom shows Raja Lodhi sitting upright focused... Suddenly begins clutching his chest, expressing visible distress. Loses balance within seconds & falls off. Hospital… pic.twitter.com/Xf3ni3fitC