ಜನರು ಮೋದಿಯನ್ನು ತಿರಸ್ಕರಿಸಿದ್ದಾರೆ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
“ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವ ಪಕ್ಷಗಳನ್ನು INDIA ಮೈತ್ರಿಕೂಟ ಸ್ವಾಗತಿಸುತ್ತದೆ”
ಹೊಸದಿಲ್ಲಿ : “ಜನಾದೇಶವು ಪ್ರಧಾನಿ ಮೋದಿಯ ವಿರುದ್ಧವಾಗಿದೆ. ಫಲಿತಾಂಶವು ಅವರಿಗೆ ನೈತಿಕವಾಗಿ ಸೋಲು ನೀಡಿದ್ದು, ಜನರು ಮೋದಿಯನ್ನು ತಿರಸ್ಕರಿಸಿದ್ದಾರೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದಿಲ್ಲಿಯ ತಮ್ಮ ನಿವಾಸದಲ್ಲಿ ಆಯೋಜಿಸಿರುವ INDIA ಒಕ್ಕೂಟದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಚುನಾವಣೆಯಲ್ಲಿ ಮೈತ್ರಿಕೂಟದ ಸದಸ್ಯರು ಉತ್ತಮವಾಗಿ ಹೋರಾಡಿದ್ದೇವೆ. ನಮ್ಮ ಒಗ್ಗಟ್ಟು, ಧೃಡತೆ ಕೆಲಸ ಮಾಡಿದೆ” ಎಂದು ಅವರು ಸಭೆಯಲ್ಲಿ ತಿಳಿಸಿದ್ದಾರೆ.
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಅದರ ಅನೇಕ ನಿಬಂಧನೆಗಳಿಗೆ ಬದ್ಧತೆಯಿರುವ ಎಲ್ಲಾ ಪಕ್ಷಗಳನ್ನು INDIA ಮೈತ್ರಿಕೂಟವು ಸ್ವಾಗತಿಸುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು.
Live Updates
- 5 Jun 2024 1:06 PM GMT
ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಯುತ್ತಿರುವ INDIA ಒಕ್ಕೂಟದ ಸಭೆ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ತೇಜಸ್ವಿ ಯಾದವ್, ಶರದ್ ಪವಾರ್, ಎಂಕೆ ಸ್ಟಾಲಿನ್, ರಾಘವ್ ಚಡ್ಡಾ, ಸುಪ್ರಿಯಾ ಸುಳೆ ಮತ್ತು ಕಲ್ಪನಾ ಸೋರೆನ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದಾರೆ.
- 5 Jun 2024 12:48 PM GMT
ಸರಕಾರ ರಚನೆ ಬೇಗ ಮಾಡಿ. ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ ಎಂದು ಪ್ರಧಾನಿ ಮೋದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
- 5 Jun 2024 12:45 PM GMT
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶೀಘ್ರದಲ್ಲೇ ರಚನೆಯಾಗಲಿದೆ : ಜೆಡಿಯು ಸಂಸದ ಸಂಜಯ್ ಕುಮಾರ್ ಝಾ
- 5 Jun 2024 12:42 PM GMT
INDIA ಒಕ್ಕೂಟದ ಸಭೆಗೆ ಕ್ಷಣಗಣನೆ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ತೇಜಸ್ವಿ ಯಾದವ್, ಶರದ್ ಪವಾರ್, ರಾಘವ್ ಚಡ್ಡಾ ಮತ್ತು ಕಲ್ಪನಾ ಸೊರೆನ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮನ. ಖರ್ಗೆ ನಿವಾಸದಲ್ಲಿ ನಡೆಯಲಿರುವ INDIA ಒಕ್ಕೂಟದ ಸಭೆ.