ಕುಸ್ತಿಪಟುಗಳ ಪ್ರತಿಭಟನೆಯಿಂದ ಡಬ್ಲ್ಯುಎಫ್ಐ ಅಮಾನತುವರೆಗಿನ ಟೈಮ್ ಲೈನ್
Photo: PTI
ಹೊಸದಿಲ್ಲಿ: ಭಾರತದ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ) ಕುಸ್ತಿಯ ಜಾಗತಿಕ ಆಡಳಿತ ಮಂಡಳಿ ಯುಡಬ್ಲ್ಯುಡಬ್ಲ್ಯುನಿಂದ ಅಮಾನತುಗೊಳ್ಳಲು ಕಾರಣವಾದ ಘಟನಾವಳಿಗಳ ಟೈಮ್ಲೈನ್ ಇಂತಿದೆ.
ಜನವರಿ 18: ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಶೋಷಣೆ ಹಾಗೂ ಬೆದರಿಕೆಯ ಆರೋಪ ಹೊರಿಸಿ ಅವರ ರಾಜೀನಾಮೆ ಹಾಗೂ ಫೆಡರೇಶನ್ ನ ವಿಸರ್ಜನೆಗೆ ಒತ್ತಾಯಿಸಿ ಕುಸ್ತಿಪಟುಗಳು ಜಂತರ್ ಮಂತರ್ ನಲ್ಲಿ ಪ್ರತಿಭಟನೆಯನ್ನು ಆರಂಭಿಸಿದ್ದರು.
ಜನವರಿ 19: ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಹಾಗೂ ಬಿಜೆಪಿ ಸದಸ್ಯೆ ಬಬಿತಾ ಫೋಗಟ್ ಅವರು ಕುಸ್ತಿಪಟುಗಳನ್ನು ಭೇಟಿಯಾಗಿ, ತಾನು ಸರಕಾರದೊಂದಿಗೆ ಮಾತನಾಡುವೆ ಎಂದು ತಿಳಿಸಿದ್ದರು. ಪ್ರತಿಭಟನಾನಿತರ ಕುಸ್ತಿಪಟುಗಳು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದು, ಯಾವುದೇ ಪರಿಹಾರ ಸಿಗಲಿಲ್ಲ.
ಜನವರಿ 20: ಪ್ರತಿಭಟನೆ ಮುಂದುವರಿಸಿದ ಕುಸ್ತಿಪಟುಗಳು ಭಾರತದ ಒಲಿಂಪಿಕ್ಸ್ ಸಂಸ್ಥೆಯ(ಐಒಎ)ಅಧ್ಯಕ್ಷೆ ಪಿ.ಟಿ. ಉಷಾಗೆ ಪತ್ರ ಬರೆದು ಆರೋಪಗಳ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿ ರಚಿಸುವಂತೆ ಹಾಗೂ ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಡಬ್ಲ್ಯು ಎಫ್ಐ ಮುನ್ನಡೆಸಲು ಹೊಸ ಸಮಿತಿ ನೇಮಿಸುವಂತೆ ಒತ್ತಾಯ.
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ತನಿಖೆಗೆ ಎಂ.ಸಿ.ಮೇರಿಕೋಮ್ ಹಾಗೂ ಯೋಗೇಶ್ವರ ದತ್ತ ಅವರನ್ನೊಳಗೊಂಡ 7 ಸದಸ್ಯರ ಸಮಿತಿ ರಚಿಸಿದ ಐಒಎ.
ಜನವರಿ 21: ಠಾಕೂರ್ ಭೇಟಿಯ ನಂತರ ತಡರಾತ್ರಿ ಪ್ರತಿಭಟನೆ ನಿಲ್ಲಿಸಿದ ಕುಸ್ತಿಪಟುಗಳು. ಬ್ರಿಜ್ ಭೂಷಣ್ ವಿರುದ್ಧ ಆರೋಪದ ತನಿಖೆಗೆ ಉಸ್ತುವಾರಿ ಸಮಿತಿ ರಚಿಸುವ ಭರವಸೆ ನೀಡಿದ ಠಾಕೂರ್.
ಜ.21: ತಕ್ಷಣವೇ ಜಾರಿಗೆ ಬರುವಂತೆ ತುರ್ತು ಎಜಿಎಂ ಸಭೆ ಸೇರಿದಂತೆ ಎಲ್ಲ ಚಟುವಟಿಕೆ ರದ್ದುಪಡಿಸುವಂತೆ ಕ್ರೀಡಾ ಸಚಿವಾಲಯದಿಂದ ಡಬ್ಲ್ಯುಎಫ್ಐಗೆ ಸೂಚನೆ.
ಜ.23: ಆರೋಪ ಪರಿಶೀಲನೆಗೆ ಬಾಕ್ಸಿಂಗ್ ಲೆಜೆಂಡ್ ಎಂಸಿ ಮೇರಿಕೋಮ್ ನೇತೃತ್ವದಲ್ಲಿ ಐವರು ಸದಸ್ಯರ ಉಸ್ತುವಾರಿ ಸಮಿತಿ ರಚನೆ
ಜ.24: ಸಮಿತಿ ಸದಸ್ಯರ ಆಯ್ಕೆಯ ವೇಳೆ ಸರಕಾರ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳಿಂದ ಅಸಮಾಧಾನ
ಎ.16: ಉಸ್ತುವಾರಿ ಸಮಿತಿ ಕ್ರೀಡಾ ಸಚಿವಾಲಯಕ್ಕೆ ವರದಿ ಸಲ್ಲಿಸಿದ ನಂತರ ಮೇ 7ಕ್ಕೆ ಚುನಾವಣೆ ಘೋಷಿಸಿದ ಡಬ್ಲ್ಯುಎಫ್ಐ.
ಎ.23: ಜಂತರ್ ಮಂತರ್ ಗೆ ವಾಪಸಾದ ಕುಸ್ತಿಪಟುಗಳು, ಬ್ರಿಜ್ ಭೂಷಣ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರನ್ನು ದಾಖಲಿಸಿದರು. ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದರು. ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ
ಎ.24: ಕ್ರೀಡಾ ಸಚಿವಾಲಯವು ಡಬ್ಲ್ಯುಎಫ್ಐನ ಮೇ 7ರ ಚುನಾವಣೆಗೆ ತಡೆ ನೀಡಿತು. 45 ದಿನಗಳಲ್ಲಿ ಚುನಾವಣೆ ನಡೆಸಲು ಅಡ್ಹಾಕ್ ಕಮಿಟಿಯನ್ನು ಐಒಎ ರಚಿಸಿತು.
ಎ.25: ರೈತ ನಾಯಕರು ಕೂಡ ಅತ್ಲೀಟ್ಗಳಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಕುಸ್ತಿಪಟುಗಳ ಪ್ರತಿಭಟನೆ ರಾಜಕೀಯ ಬಣ್ಣ ಪಡೆಯಿತು. ಕುಸ್ತಿಪಟುಗಳು ಬ್ರಿಜ್ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋದರು.
ಎ.27: ಐಒಎಯಿಂದ ಮೂವರು ಸದಸ್ಯರ ಸಮಿತಿ ರಚನೆ
ಎ.28: ಬ್ರಿಜ್ ಭೂಷಣ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಹೊರಿಸಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರಿಂದ ಎರಡು ಎಫ್ಐಆರ್ ದಾಖಲು
ಮೇ 3: ಕುಸ್ತಿಪಟುಗಳು ಹಾಗೂ ದಿಲ್ಲಿ ಪೊಲೀಸರ ನಡುವೆ ಜಟಾಪಟಿ ಉಂಟಾದ ಕಾರಣ ಹಲವು ಪ್ರತಿಭಟನಾಕಾರರಿಗೆ ಗಾಯ. ಕುಡಿದ ಮತ್ತಿನಲ್ಲಿದ್ದ ಅಧಿಕಾರಿಗಳು ಮಹಿಳಾ ಕುಸ್ತಿಪಟುಗಳೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಆರೋಪ.
ಮೇ 4: ಎಫ್ಐಆರ್ ದಾಖಲು ಹಾಗೂ 7 ದೂರುದಾರರಿಗೆ ಭದ್ರತೆ ಒದಗಿಸಿದ್ದನ್ನು ಗಮನಿಸಿದ ಸುಪ್ರೀಂಕೋರ್ಟ್ ಮೂವರು ಮಹಿಳಾ ಕುಸ್ತಿಪಟುಗಳ ಮನವಿ ವಿಚಾರಣೆಯನ್ನು ಮುಕ್ತಾಯಗೊಳಿಸಿತ್ತು.
ಮೇ 5: ದಿಲ್ಲಿ ಪೊಲೀಸರಿಂದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ದೂರುದಾರರಿಂದ ಹೇಳಿಕೆ ದಾಖಲು
ಮೇ 10: ಬ್ರಿಜ್ಭೂಷಣ್ಗೆ ನಾರ್ಕೊ ಟೆಸ್ಟ್ ನಡೆಸುವಂತೆ ಕುಸ್ತಿಪಟುಗಳ ಆಗ್ರಹ
ಮೇ 11: ಪೊಲೀಸರಿಂದ ಬ್ರಿಜ್ಭೂಷಣ್ ಹೇಳಿಕೆ ದಾಖಲು
ಜೂನ್ 3: ಕುಸ್ತಿಪಟುಗಳನ್ನು ಭೇಟಿಯಾದ ಗೃಹ ಸಚಿವ ಅಮಿತ್ ಶಾ
ಜೂನ್ 8: ಬ್ರಿಜ್ಭೂಷಣ್ ವಿರುದ್ಧ ದೂರು ಸಲ್ಲಿಸಿದ್ದ ಅಪ್ರಾಪ್ತ ಕುಸ್ತಿಪಟು ತಂದೆಯಿಂದ ದೂರು ಹಿಂತೆಗೆತ.
ಜೂ.13: ಡಬ್ಲ್ಯುಎಫ್ಐ ಚುನಾವಣೆ ಜುಲೈ 6ಕ್ಕೆ ನಿಗದಿಪಡಿಸಿದ ರಿಟರ್ನಿಂಗ್ ಅಧಿಕಾರಿ.
ಜೂ.15: ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ ದಿಲ್ಲಿ ಪೊಲೀಸ್
ಜೂ.21: ಐದು ರಾಜ್ಯಕುಸ್ತಿಸಂಸ್ಥೆಗಳು ಚುನಾವಣೆಗೆ ಮತ ಹಕ್ಕುಗಳಿಗಾಗಿ ಬೇಡಿಕೆ ಇಟ್ಟು ನ್ಯಾಯಾಲಯಕ್ಕೆ ಮೊರೆ. ಜುಲೈ 11ರಂದು ಚುನಾವಣೆ ಮರು ನಿಗದಿಪಡಿಸಿದ ಐಒಎ ಅಡ್ಹಾಕ್ ಸಮಿತಿ.
ಜೂ.25: ಅಸ್ಸಾಂ ಕುಸ್ತಿ ಸಂಸ್ಥೆಯ ಅರ್ಜಿಯ ಮೇರೆಗೆ ಜುಲೈ 11ರಂದು ನಿಗದಿಯಾಗಿದ್ದ ಡಬ್ಲ್ಯುಎಫ್ಐ ಚುನಾವಣೆಗೆ ತಡೆ ವಿಧಿಸಿದ ಗೌಹಾಟಿ ಹೈಕೋರ್ಟ್.
ಜು.18: ಬ್ರಿಜ್ ಭೂಷಣ್ ಸಿಂಗ್ಗೆ ದಿಲ್ಲಿ ನ್ಯಾಯಾಲಯದಿಂದ ಮಧ್ಯಂತರ ಜಾಮೀನು.
ಜುಲೈ 19: ಡಬ್ಲ್ಯುಎಫ್ಐಗೆ ಆಗಸ್ಟ್ 7ರಂದು ಚುನಾವಣೆ ನಿಗದಿ.
ಜುಲೈ 20: ಡಬ್ಲ್ಯುಎಫ್ಐ ಚುನಾವಣೆ ಆಗಸ್ಟ್ 12ರಂದು ಮರು ನಿಗದಿ
ಆ.11: ಹರ್ಯಾಣ ಕುಸ್ತಿ ಸಂಸ್ತೆಯ ಅರ್ಜಿಯ ಮೇರೆಗೆ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ನಿಂದ ಆ.12ರ ಡಬ್ಲ್ಯುಎಫ್ಐ ಚುನಾವಣೆಗೆ ತಡೆ