ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ಆಜ್ ತಕ್ ನ್ಯೂಸ್ ಆ್ಯಂಕರ್!
ಮುಂದಾಗಿದ್ದೇನು?
ಮನಮೋಹನ್ ಸಿಂಗ್ , ನರೇಂದ್ರ ಮೋದಿ | PTI
ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಸುದ್ದಿಯನ್ನು ಓದುವ ಭರದಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಿ ಆಜ್ ತಕ್ ನ್ಯೂಸ್ ಆ್ಯಂಕರ್ ಒಬ್ಬರು ಎಡವಟ್ಟು ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಜ್ ತಕ್ ನ್ಯೂಸ್ ಆ್ಯಂಕರ್ ಗುರುವಾರ ಡಿ.26 ರಂದು ರಾತ್ರಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಧಿವಶರಾದ ಸುದ್ದಿಯನ್ನು ಓದುವ ಭರದಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದ್ದಾರೆ.
ಈ ಕೆಲ ಸೆಕೆಂಡ್ಗಳ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳ ಬಳಕೆದಾರರು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಚಾನೆಲ್ ಗೆ ಛೀಮಾರಿ ಹಾಕಿದ್ದಾರೆ.
ನಿರೂಪಕಿ ಹೇಳಿದ ತಪ್ಪನ್ನು ವಿವಿಧ ವಿಡಿಯೋಗಳ ಮೂಲಕ ಟ್ರೋಲ್ ಮಾಡಲಾಗುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Next Story