ಅತಿಶಿ ʼಡಮ್ಮಿ ಸಿಎಂʼ ಎಂದು ಟೀಕಿಸಿದ ಸ್ವಾತಿ ಮಲಿವಾಲ್
ರಾಜಿನಾಮೆ ನೀಡಿ ಬಿಜೆಪಿ ಟಿಕೆಟ್ ನಲ್ಲಿ ರಾಜ್ಯಸಭೆಗೆ ಹೋಗಿ ಎಂದು ತಿರುಗೇಟು ನೀಡಿದ ಆಪ್
ಸ್ವಾತಿ ಮಲಿವಾಲ್ (Photo: PTI)
ಹೊಸದಿಲ್ಲಿ: ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರ ಆಯ್ಕೆಯನ್ನು ವ್ಯಂಗ್ಯವಾಡಿದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ರಾಜೀನಾಮೆ ನೀಡಬೇಕು ಎಂದು ಎಎಪಿ ಪಕ್ಷವು ಆಗ್ರಹಿಸಿದೆ.
ಸ್ವಾತಿ ಮಲಿವಾಲ್ ಎಎಪಿಯಿಂದ ರಾಜ್ಯಸಭೆಗೆ ಹೋದರೂ, ಬಿಜೆಪಿಯ ಅಣತಿಯಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆಪ್ ಹಿರಿಯ ನಾಯಕ ದಿಲೀಪ್ ಪಾಂಡೆ ಹೇಳಿದ್ದಾರೆ.
ಸ್ವಾತಿ ಮಲಿವಾಲ್ ಎಎಪಿಯಿಂದ ರಾಜ್ಯಸಭಾ ಟಿಕೆಟ್ ತೆಗೆದುಕೊಳ್ಳುತ್ತಾರೆ ಆದರೆ ಬಿಜೆಪಿಯ ಸ್ಕ್ರಿಪ್ಟ್ ಅನ್ನು(ಅಣತಿಯಂತೆ ಪ್ರತಿಕ್ರಿಯಿಸು) ಓದುತ್ತಾರೆ. ಅವರಿಗೆ ಸ್ವಲ್ಪ ನಾಚಿಕೆ ಇದ್ದರೆ, ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಟಿಕೆಟ್ ನಲ್ಲಿ ರಾಜ್ಯಸಭೆಗೆ ಹೋಗುವ ಹಾದಿಯನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
ಅತಿಶಿ ಅವರನ್ನು ಇಂದು ದಿಲ್ಲಿ ಸರಕಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಎಪಿ ಸಂಸದೆ ಸ್ವಾತಿ ಮಲಿವಾಲ್, ಅತಿಶಿ ʼಡಮ್ಮಿʼ ಮುಖ್ಯಮಂತ್ರಿಯಾಗಿದ್ದು, ಅವರ ನೇಮಕವು ದಿಲ್ಲಿಯ ಭದ್ರತೆಗೆ ಸಂಬಂಧಿಸಿದೆ, ದೇವರು ದಿಲ್ಲಿಯನ್ನು ಕಾಪಾಡಲಿ ಎಂದು ಹೇಳಿದ್ದಾರೆ.
“ಅಪ್ಝಲ್ ಗುರುವನ್ನು ನೇಣಿನ ಶಿಕ್ಷೆಯಿಂದ ಪಾರು ಮಾಡಲು ದೀರ್ಘಕಾಲ ಹೋರಾಡಿದ ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರು ಇಂದು ದಿಲ್ಲಿಯ ಮುಖ್ಯಮಂತ್ರಿಯಾಗುತ್ತಿದ್ದಾರೆ. ಅಪ್ಝಲ್ ಗುರುವನ್ನು ನೇಣಿನಿಂದ ರಕ್ಷಿಸಲು ಅವರ ಪೋಷಕರು ರಾಷ್ಟ್ರಪತಿಗಳಿಗೆ ಕ್ಷಮಾಯಾಚನೆಯ ಪತ್ರಗಳನ್ನು ಬರೆದಿದ್ದರು. ಅವರ ಪ್ರಕಾರ, ಅಫ್ಝಲ್ ಗುರು ಮುಗ್ಧನಾಗಿದ್ದ ಹಾಗೂ ರಾಜಕೀಯ ಪಿತೂರಿಯ ಭಾಗವಾಗಿ ಆತನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು'