ಚಂದ್ರ, ಭೂಮಿಯ ಚಿತ್ರಗಳನ್ನು ಕಳುಹಿಸಿದ ಆದಿತ್ಯ-ಎಲ್1
Photo: X/@isro
ಹೊಸದಿಲ್ಲಿ: ಭಾರತದ ಸನ್ ಮಿಷನ್ ಭಾಗವಾಗಿ ಇತ್ತೀಚೆಗೆ ಉಡಾವಣೆಗೊಂಡ ಆದಿತ್ಯ-ಎಲ್1 ಇಂದು ತಾನು ಕ್ಲಿಕ್ಕಿಸಿದ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ. ಆದಿತ್ಯ-ಎಲ್1, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರವಿರುವ ಲಗ್ರಂಗಿಯನ್ ಪಾಯಿಂಟ್ (ಎಲ್1) ನತ್ತ ಸಾಗುವ ವೇಳೆ ಈ ಫೋಟೋಗಳನ್ನು ಕ್ಲಿಕ್ಕಿಸಿದೆ. ಇವುಗಳ ಜೊತೆಗೆ ಆದಿತ್ಯ- ಎಲ್1 ಕ್ಲಿಕ್ಕಿಸಿದ ಸೆಲ್ಫೀಯನ್ನೂ ಇಸ್ರೋ ಬಿಡುಗಡೆಗೊಳಿಸಿದೆ.
ಆದಿತ್ಯ-ಎಲ್1 ಕಳುಹಿಸಿದ ಚಿತ್ರಗಳಲ್ಲಿ ಆದಿತ್ಯನ ಮೇಲಿರುವ ಕ್ಯಾಮೆರಾದಿಂದ ಸೆರೆಹಿಡಿದ ವಿಇಎಲ್ಸಿ (ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್) ಮತ್ತು ಸೂಟ್ (ಸೋಲಾರ್ ಅಲ್ಟ್ರಾವಾಯ್ಲೆಟ್ ಇಮೇಜರ್) ಕಾಣಿಸುತ್ತದೆ.
ಸೆಪ್ಟೆಂಬರ್ 2ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಆದಿತ್ಯ-ಎಲ್1 125 ದಿನಗಳ ನಂತರ ತನ್ನ ಉದ್ದೇಶಿತ ಎಲ್1 ಕಕ್ಷೆಯನ್ನು ತಲುಪಲಿದೆ.
Aditya-L1 Mission:
— ISRO (@isro) September 7, 2023
Onlooker!
Aditya-L1,
destined for the Sun-Earth L1 point,
takes a selfie and
images of the Earth and the Moon.#AdityaL1 pic.twitter.com/54KxrfYSwy