ಅಜಿತ್ ಪವಾರ್ ನೇತೃತ್ವದ NCP ಸೇರಲು ಇಬ್ಬರು ಶಾಸಕರಿಗೆ ಕೋಟ್ಯಂತರ ರೂ. ಆಮಿಷ: ಕಾಂಗ್ರೆಸ್ ಆರೋಪ
ಅಜಿತ್ ಪವಾರ್ | PC : PTI
ಮುಂಬೈ: ಅಜಿತ್ ಪವಾರ್ ನೇತೃತ್ವದ ಎನ್ಸಿಪಿಗೆ ಸೇರ್ಪಡೆಯಾಗಲು ಇಬ್ಬರು ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಮೇಶ್ ಚೆನ್ನಿತ್ತಲ, “ಅಜಿತ್ ಪವಾರ್ ನೇತೃತ್ವದ ಎನ್ಸಿಪಿಗೆ ಸೇರ್ಪಡೆಯಾಗಲು ಇಬ್ಬರು ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಇದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಬರುತ್ತದೆ. ಈ ಕುರಿತು ಗೃಹ ಖಾತೆಯ ಮುಖ್ಯಸ್ಥರಾದ ಮುಖ್ಯಮಂತ್ರಿಗಳು ಏಕೆ ಮೌನವಾಗಿದ್ದಾರೆ? ಜನರಿಗೆ ಏನಾಯಿತು ಎಂಬುದನ್ನು ತಿಳಿಸುವ ಹೊಣೆಗಾರಿಕೆ ಅವರಿಗಿದೆ. ಲಂಚದ ಆಮಿಷ ಒಡ್ಡುವುದು ಹಾಗೂ ಸ್ವೀಕರಿಸುವುದು ಎರಡೂ ಕ್ರಿಮಿನಲ್ ಚಟುವಟಿಕೆಗಳಾಗಿವೆ” ಎಂದು ಬರೆದುಕೊಂಡಿದ್ದಾರೆ.
ಈ ನಡುವೆ, ಅ. 26ರ ವೇಳೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯೂ ಆದ ರಮೇಶ್ ಚೆನ್ನಿತ್ತಲ ಸ್ಪಷ್ಟಪಡಿಸಿದ್ದಾರೆ.