‘ಜಿಲ್ಲಾಧಿಕಾರಿಗಳೊಂದಿಗೆ ಅಮಿತ್ ಶಾ ಸಭೆ’ ಹೇಳಿಕೆ | ವಿವರಗಳನ್ನು ಸಲ್ಲಿಸುವಂತೆ ಜೈರಾಮ್ ರಮೇಶ್ಗೆ ಚುನಾವಣಾ ಆಯೋಗ ಸೂಚನೆ
ಜೈರಾಮ್ ರಮೇಶ್ | PTI
ಹೊಸದಿಲ್ಲಿ: ಲೋಕಸಭಾ ಚುನಾಣೆಯ ಮತಏಣಿಕೆ ದಿನಾಂಕಕ್ಕೆ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 150 ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದಿದ್ದಾರೆಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರಿಗೆ ಚುನಾವಣಾ ಆಯೋಗವು ಪತ್ರವೊಂದನ್ನು ಬರೆದಿದ್ದು, ಆ ಬಗ್ಗೆ ತನ್ನೊಂದಿಗೆ ವಿವರಗಳನ್ನು ಹಂಚಿಕೊಳ್ಳುವಂತೆ ಅವರನ್ನು ಕೇಳಿಕೊಂಡಿದೆ.
ರವಿವಾರ 7:00 ಗಂಟೆಯೊಳಗೆ ವಿವರಗಳನ್ನು ಸಲ್ಲಿಸುವಂತೆ ಅವರಿಗೆ ಚುನಾವಣಾ ಆಯೋಗವು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
‘‘ ನಿರ್ಗಮನ ಗೃಹ ಸಚಿವರು ಜಿಲ್ಲಾಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಅವರ ಪೈಕಿ ಸುಮಾರು 150 ಮಂದಿಯೊಂದಿಗೆ ಈವರೆಗೆ ಅವರು ಮಾತನಾಡಿದ್ದಾರೆ. ಇದೊಂದು ಲಜ್ಜೆಗೆಟ್ಟ ಬೆದರಿಕೆಯಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಗ್ಗೆ ಬಿತೆಪಿ ಎಷ್ಟೊಂದು ಹತಾಶವಾಗಿದೆಯೆುಂದನ್ನು ಇದು ಸೂಚಿಸುತ್ತದೆ” ಎಂದು ಜೈರಾಮ್ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಲೋಕಸಭಾ ಚುನಾವಣೆಯ ಮತ ಏಣಿಕೆ ಜೂನ್ 4ರಂದು ನಡೆಯಲಿದೆ.
Next Story