ಬಂಧಿತ ಗ್ಯಾಂಗ್ಸ್ಟರ್- ರಾಜಕಾರಣಿ ಮುಖ್ತಾರ್ ಅನ್ಸಾರಿ ಆಸ್ಪತ್ರೆಗೆ
ಜೈಲಿನಲ್ಲಿ ವಿಷವುಣಿಸಲಾಗಿದೆಯೆಂದು ಸೋದರನ ಆರೋಪ
ಮುಖ್ತಾರ್ ಅನ್ಸಾರ್ | Photo: PTI
ಹೊಸದಿಲ್ಲಿ,: ಬಂಧನದಲ್ಲಿರುವ ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರ್ ನಖ್ವಿ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಬಾಂಡಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾನೆ.
ಅನ್ಸಾರಿಗೆ ಜೈಲಿನಲ್ಲಿ ವಿಷವುಣಿಸಲಾಗಿದೆಯೆಂದು ಆಸ್ಪತ್ರೆಯಲ್ಲಿ ಆತನ ಭೇಟಿಗೆ ಆಗಮಿಸಿದ್ದ ಸೋದರ, ಗಾಝಿಪುರ ಎಂಪಿ ಅಫ್ಝಲ್ ಅನ್ಸಾರಿ ಆಪಾದಿಸಿದ್ದಾರೆ.ಅನ್ಸಾರಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಜ್ಞಾವಸ್ಥೆಯಲ್ಲಿದ್ದಾನೆಂದು ಆತ ಹೇಳಿದ್ದಾರೆ.
ಈ ಮಧ್ಯೆ ಉ.ಪ್ರ. ಕಾರಾಗೃಹ ಇಲಾಖೆಯು ಲಕ್ನೋದಲ್ಲಿ ಮಂಗಳವಾರ ಅಧಿಕೃತ ಹೇಳಿಕೆಯೊಂದನ್ನು ನೀಡಿದ್ದು, ಅನ್ಸಾರಿ ಆರೋಗ್ಯ ಸೋಮವಾರ ರಾತ್ರಿ ಹಠಾತ್ತನೇ ಹದಗೆಟ್ಟಿದ್ದು, ಆತ ಶೌಚಗೃಹದಲ್ಲಿ ಕುಸಿದುಬಿದ್ದಿದ್ದನು. ಆತನ ತಕ್ಷಣವೇ ಚಿಕಿತ್ಸೆ ನೀಡಿ, ಬಾಂಡಾದ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
60 ವರ್ಷದ ಮುಖ್ತಾರ್ ಅನ್ಸಾರಿ ಮಾವೂ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ.ಆತನ ವಿರುದ್ಧ 60ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, 2005ರಿಂದೀಚೆಗೆ ಆತನ ಜೈಲಿನಲ್ಲಿಯೇ ಇದ್ದಾನೆ.
ಕಳೆದ ವರ್ಷ ಉತ್ತರಪ್ರದೇಶ ಪೊಲೀಸರು ಪ್ರಕಟಿಸಿದ 66 ಗ್ಯಾಂಗ್ಸ್ಟರ್ಗಳ ಪಟ್ಟಿಯಲ್ಲೂ ಅನ್ಸಾರಿಯ ಹೆಸರು ಒಳಗೊಂಡಿತ್ತು. ನಕಲಿ ಎನ್ಕೌಂಟರ್ನಲ್ಲಿ ಮುಖ್ತಾರ್ ಅನ್ಸಾರಿಯ ಹತ್ಯೆಯಾಗುವ ಸಾಧ್ಯತೆಯಿದೆಯೆಂದು ಅತನ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು.