ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ: ರಾಹುಲ್ ಗಾಂಧಿ
Photo : PTI
ಹೊಸದಿಲ್ಲಿ: ಮಧ್ಯಪ್ರದೇಶ, ಛತ್ತೀಸ್ಗಡ ಹಾಗೂ ರಾಜಸ್ಥಾನದ ಜನಾದೇಶವನ್ನು ತನ್ನ ಪಕ್ಷ ನಮ್ರತೆಯಿಂದ ಒಪ್ಪಿಕೊಳ್ಳುತ್ತದೆ. ಆದರೆ, ಸೈದ್ಧಾಂತಿಕ ಸಮರ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢದ ವಿಧಾನ ಸಭಾ ಚುನಾವಣೆಯಲ್ಲಿ ಜಯ ಗಳಿಸುವುದರೊಂದಿಗೆ ಬಿಜೆಪಿ ಹಿಂದಿ ಭಾಷಿಕರ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಕಾಂಗ್ರೆಸ್ ತೆಲಂಗಾಣದಿಂದ ಬಿಅರ್ಎಸ್ ಅನ್ನು ಹೊರ ಹಾಕಿದೆ ಎಂದು ಅವರು ಹೇಳಿದರು.
ಹಿಂದಿಯಲ್ಲಿ ಮಾಡಿದ ‘ಎಕ್ಸ್’ನ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ, ‘‘ನಾನು ತೆಲಂಗಾಣದ ಜನತೆಗೆ ಅಭಾರಿಯಾಗಿದ್ದೇನೆ. ತೆಲಂಗಾಣದ ಜನತೆಗೆ ನೀಡಿದ ಭರವಸೆಯನ್ನು ನಾವು ಖಂಡಿತವಾಗಿ ಈಡೇರಿಸುತ್ತೇವೆ’’ ಎಂದಿದ್ದಾರೆ.
ಕಠಿಣ ಶ್ರಮ ವಹಿಸಿದ ಹಾಗೂ ಬೆಂಬಲ ನೀಡಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Next Story