Budget Live | ಮಧ್ಯಂತರ ಬಜೆಟ್ ; ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂದ ವಿತ್ತ ಸಚಿವೆ
ಹೊಸದಿಲ್ಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಸರಕು ಸೇವಾ ತೆರಿಗೆ (ಜಿಎಸ್ಟಿ)ಯು ಒಂದು ರಾಷ್ಟ್ರ ಒಂದು ಮಾರುಕಟ್ಟೆ ಒಂದು ತೆರಿಗೆಯನ್ನು ಸಕ್ರಿಯಗೊಳಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. "ತೆರಿಗೆ ಸುಧಾರಣೆಗಳು ತೆರಿಗೆಯ ಮೂಲವನ್ನು ಆಳವಾಗಿ ಮತ್ತು ವಿಸ್ತರಿಸಲು ಕಾರಣವಾಗಿವೆ" ಎಂದು ಅವರು ಹೇಳಿದರು.
ಸಬ್ಕಾ ಸಾಥ್, ಸಬ್ಕಾ ವಿಕಾಸ್ ನಮ್ಮ ಸರಕಾರದ ಉದ್ದೇಶ ಎಂದು ವಿತ್ತ ಸಚಿವೆ ಹೇಳಿದರು.
Live Updates
- 1 Feb 2024 11:29 AM GMT
ಕೇಂದ್ರ ಸಚಿವರ ಸಂಬಳ, ಪ್ರಧಾನಿ ಕಚೇರಿ, ಅತಿಥಿಗಳ ಆತಿಥ್ಯ ಮತ್ತು ಮನರಂಜನೆಯ ವೆಚ್ಚಗಳಿಗಾಗಿ 1,249 ಕೋಟಿ ರೂ.ಗಳ ಮೀಸಲು
- 1 Feb 2024 6:21 AM GMT
ವಂದೇ ಭಾರತ್ ಮಾದರಿಯ ರೈಲುಗಳನ್ನು ಹೆಚ್ಚಳ ಮಾಡಲಾಗುವುದು. ವಿಮಾನ ನಿಲ್ದಾಣಗಳನ್ನು ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು.
- 1 Feb 2024 6:19 AM GMT
ಲಕ್ಷದ್ವೀಪ ಸೇರಿದಂತೆ ದ್ವೀಪಗಳಲ್ಲಿ ಬಂದರು ಸಂಪರ್ಕ, ಸೌಕರ್ಯಗಳಿಗಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು
Next Story