ʼಬುಲ್ಡೋಝರ್ ನ್ಯಾಯʼ ಸ್ವೀಕಾರಾರ್ಹವಲ್ಲ: ಸಿಜೆಐ ಡಿವೈ ಚಂದ್ರಚೂಡ್ ಕೊನೆಯ ತೀರ್ಪು
ಜಸ್ಟಿಸ್ ಡಿವೈ ಚಂದ್ರಚೂಡ್ (PTI)
ಹೊಸದಿಲ್ಲಿ: 'ಬುಲ್ಡೋಝರ್ ನ್ಯಾಯ' ಸ್ವೀಕಾರಾರ್ಹವಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗುವ ಮುನ್ನ ತನ್ನ ಕೊನೆಯ ತೀರ್ಪಿನಲ್ಲಿ ಜಸ್ಟಿಸ್ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಆಸ್ತಿ ಕೆಡವುವ ಬೆದರಿಕೆ ಮೂಲಕ ನಾಗರಿಕರ ಧ್ವನಿಯನ್ನು ಮೌನಗೊಳಿಸಬಾರದು ಮತ್ತು ಕಾನೂನಿನ ಆಳ್ವಿಕೆಯಲ್ಲಿ 'ಬುಲ್ಡೋಝರ್ ನ್ಯಾಯ' ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ʼನಾಗರಿಕರ ಮನೆಯ ಸುರಕ್ಷತೆ ಮತ್ತು ಭದ್ರತೆʼ ರಕ್ಷಣೆಗೆ ಅರ್ಹವಾದ ಮೂಲಭೂತ ಹಕ್ಕುಗಳಾಗಿವೆ. ಅಕ್ರಮ ಕಟ್ಟಡಗಳು ಅಥವಾ ನಿರ್ಮಾಣಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಸರಿಯಾದ ಕಾನೂನು ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಸ್ಟಿಸ್ ಡಿವೈ ಚಂದ್ರಚೂಡ್ ಹೇಳಿದ್ದಾರೆ.
'ಬುಲ್ಡೋಜರ್ ನ್ಯಾಯ' ಸ್ವೀಕಾರಾರ್ಹವಲ್ಲ. ಇಂತಹ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಜಸ್ಟಿಸ್ ಡಿವೈ ಚಂದ್ರಚೂಡ್ ಕೊನೆಯ ತೀರ್ಪಿನಲ್ಲಿ ತಿಳಿಸಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 10ರಂದು ಅಧಿಕೃತವಾಗಿ ನಿವೃತ್ತರಾಗಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಅವರ ವಿಶೇಷ ಅಧಿಕಾರಾವಧಿ ಕೊನೆಗೊಂಡಿದೆ. ಅವರು ನವೆಂಬರ್ 2022ರಲ್ಲಿ ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.