'ಬುಲ್ಡೋಝರ್ ನ್ಯಾಯʼ ಕಾನೂನುಬಾಹಿರʼ, ಆರೋಪ, ಅಪರಾಧದ ಕಾರಣಕ್ಕೆ ಆಸ್ತಿಗಳನ್ನು ಕಡೆವುವಂತಿಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ʼಬುಲ್ಡೋಝರ್ ನ್ಯಾಯʼ ಅಸಂವಿಧಾನಿಕ ಎಂದ ಪೀಠ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 'ಬುಲ್ಡೋಝರ್ ನ್ಯಾಯ ಕಾನೂನುಬಾಹಿರವಾಗಿದೆ. ಕ್ರಿಮಿನಲ್ ಕೃತ್ಯಗಳು, ಆರೋಪಗಳು ಅಥವಾ ಅಪರಾಧಗಳ ಕಾರಣಕ್ಕೆ ಆಸ್ತಿಗಳನ್ನು ಕೆಡವಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು, ಬುಲ್ಡೋಝರ್ ನ್ಯಾಯ ಅಸಂವಿಧಾನಿಕ ಎಂದು ಹೇಳಿದೆ.
ಬುಲ್ಡೋಝರ್ ಕ್ರಮಕ್ಕೆ ಬ್ರೇಕ್ ಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ಕಾರ್ಯಾಂಗದ ಪ್ರತಿನಿಧಿಗಳು ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಕಾರ್ಯಾಂಗದ ಪ್ರತಿನಿಧಿಗಳು ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ. ಕೇವಲ ಆರೋಪವನ್ನು ಆಧರಿಸಿ, ಅವನ ಮನೆಯನ್ನು ಕೆಡವಿದರೆ, ಅದು ಕಾನೂನಿನ ಮೂಲ ತತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಕಾರ್ಯಾಂಗದ ಪ್ರತಿನಿಧಿಗಳು ನ್ಯಾಯಾಧೀಶರಾಗಲು ಮತ್ತು ಆರೋಪಿಯ ಆಸ್ತಿಯನ್ನು ಕೆಡವವ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲಎಂದು ಸುಪ್ರೀಂಕೋರ್ಟ್ ಹೇಳಿದೆ.