ಶಿವಸೇನೆ ಅಭ್ಯರ್ಥಿಯ ಕಾರಿನ ಮೇಲೆ ಗುಂಡು
ಸಾಂದರ್ಭಿಕ ಚಿತ್ರ (freepik.com)
ಮುಂಬೈ : ಮಹಾರಾಷ್ಟ್ರದ ಶ್ರೀರಾಮ್ಪುರದಲ್ಲಿ ಬುಧವಾರ ಮುಂಜಾನೆ ಶಿವಸೇನೆ (ಏಕನಾಥ ಶಿಂದೆ) ಬಣದ ಅಭ್ಯರ್ಥಿ ಭಾವುಸಾಹೇಬ್ ಕಾಂಬ್ಳೆ ಅವರ ಕಾರಿನ ಮೇಲೆ ಮೂವರು ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಮೋಟರ್ಸೈಕಲ್ಗಳಲ್ಲಿ ಬಂದ ಮೂವರು ಅಶೋಕ ಶುಗರ್ ಮಿಲ್ಸ್ ಸಮೀಪದ ಕಾಂಬ್ಳೆಯ ಕಾರಿಗೆ ಗುಂಡು ಹಾರಿಸಿದರು. ಆದರೆ, ಗುಂಡುಗಳು ಕಾರು ಮತ್ತು ಕಾಂಬ್ಳೆಗೆ ತಗುಲಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ತನಿಖೆ ಪ್ರಗತಿಯಲ್ಲಿದೆ.
ಕಾಂಬ್ಳೆ ಕಾಂಗ್ರೆಸ್ನ ಹೇಮಂತ್ ಭುಜಂಗರಾವ್ ಓಗಳೆ ವಿರುದ್ಧ ಸ್ಪರ್ಧಿಸಿದ್ದಾರೆ.
Next Story