Chandrayaan-3: ಚಂದ್ರನೆಡೆಗೆ ಭಾರತದ ನಡೆ; ಇಲ್ಲಿದೆ ಪಯಣದ ಮಾಹಿತಿ
ಚಂದ್ರಯಾನ-3 | Photo: twitter \ @isro
ಬೆಂಗಳೂರು: ಭಾರತದ ಚಂದ್ರಯಾನ-3 ಯೋಜನೆಯ ‘ವಿಕ್ರಮ’ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಸಮೀಪ ಬುಧವಾರ ಯಶಸ್ವಿಯಾಗಿ ನೆಲಸ್ಪರ್ಶ ಮಾಡಿದೆ. ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರನ್ನು ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.ಅದೂ ಅಲ್ಲದೆ, ಚಂದ್ರನ ನೆಲದ ಮೇಲೆ ಲ್ಯಾಂಡರೊಂದನ್ನು ನಿಧಾನವಾಗಿ ಇಳಿಸಿದ ನಾಲ್ಕನೇ ದೇಶ ಭಾರತವಾಗಿದೆ. ಇದಕ್ಕೂ ಮೊದಲು, ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ಚೀನಾ ಈ ಸಾಧನೆಯನ್ನು ಮಾಡಿದ್ದವು.
ಜುಲೈ 6: ಮಿಶನ್ ಚಂದ್ರಯಾನ-3 ಜುಲೈ 14ರಂದು ಆಂಧ್ರದ ಶ್ರೀಹರಿಕೋಟಾದಲ್ಲಿ ಉಡಾವಣೆಗೊಳ್ಳಲಿದೆಯೆಂದು ಇಸ್ರೋ ಘೋಷಣೆ
ಜುಲೈ11: ಸಮಗ್ರವಾದ 24 ತಾಸುಗಳ ರಿಹರ್ಸಲ್ ಯಶಸ್ವಿ ಮುಕ್ತಾಯ
ಜುಲೈ 14: ಎಲ್ವಿಎಂ3 ಎಂ4 ರಾಕೆಟ್ ಮೂಲಕ ಚಂದ್ರಯಾನ - 3 ಬಾಹ್ಯಾಕಾಶ ಕಕ್ಷೆಗೆ ಯಶಸ್ವಿ ಉಡಾವಣೆ
ಜುಲೈ 15: ನೌಕೆಯನ್ನು ಕಕ್ಷೆಯಿಂದ ಎತ್ತರಕ್ಕೊಯ್ಯುವ ಮೊದಲ ಕಾರ್ಯಾಚರಣೆ. 41,762ಕಿ.ಮೀ.x 173 ಕಿ.ಮೀ. ಕಕ್ಷೆಯನ್ನು ತಲುಪಿದ ಬಾಹ್ಯಾಕಾಶ ನೌಕೆ.
ಜುಲೈ 17: ಕಕ್ಷೆಯಿಂದ ನೌಕೆಯನ್ನು ಎತ್ತರಿಸುವ ಎರಡನೆ ಕಾರ್ಯಾಚರಣೆಯೂ ಸಫಲ. 41,603ಕಿ.ಮೀ. x 226 ಕಿ.ಮೀ. ಕಕ್ಷೆಯನ್ನು ತಲುಪಿದ ನೌಕೆ.
ಜುಲೈ 22 : 71,351ಕಿ.ಮೀ. x 233 ಕಿ.ಮೀ. ಕಕ್ಷೆಯನ್ನು ಪ್ರವೇಶಿಸಿದ ಬಾಹ್ಯಾಕಾಶ ನೌಕೆ.
ಜುಲೈ 25: ಬಾಹ್ಯಾಕಾಶ ನೌಕೆಯನ್ನು ಕಕ್ಷೆಯಿಂದ ಎತ್ತರಕ್ಕೇರಿಸುವ ಇನ್ನೊಂದು ಕಾರ್ಯಾಚರಣೆಯೂ ಯಶಸ್ವಿ. 1,27,603 ಕಿ.ಮೀ. x 236 ಕಿ.ಮೀ. ಕಕ್ಷೆಗೆ ಪ್ರವೇಶ.
ಆಗಸ್ಟ್ 1: ಭೂಕಕ್ಷೆಯನ್ನು ತೊರೆದು 288ಕಿ.ಮೀ. x 3,69,328 ಕಿ.ಮೀ.ನ ಟ್ರಾನ್ಸ್ಲುನಾರ್ ಪಥದಲ್ಲಿ ಸಾಗಿದ ಬಾಹ್ಯಾಕಾಶ ನೌಕೆ. ಚಂದ್ರನ ಕಕ್ಷೆಯತ್ತ ಪಯಣ.
ಆಗಸ್ಟ್ 5: ಚಂದ್ರನ ಕಕ್ಷೆಗೆ ಯಶಸ್ವಿ ಪ್ರವೇಶ
ಆಗಸ್ಟ್ 14: ಚಂದ್ರನ ಕಕ್ಷೆಯಲ್ಲಿ ಪರಿಭ್ರಮಿಸುವ ಎತ್ತರವನ್ನು 174 ಕಿ.ಮೀ. x 1437 ಕಿ.ಮೀ. ಗೆ ಇಳಿಸಿದ ನೌಕೆ
ಆಗಸ್ಟ್ 14: ಚಂದ್ರನ ಕಕ್ಷೆಯಲ್ಲಿ ಪರಿಭ್ರಮಣದ ಎತ್ತರವನ್ನು 151 ಕಿ.ಮೀ.ನಿಂದ x 179 ಕಿ.ಮೀ. ಗೆ ಇಳಿಸಿದ ಬಾಹ್ಯಾಕಾಶ ನೌಕೆ
ಆಗಸ್ಟ್ 17: ಪ್ರೊಪಲ್ಶನ್ ಮೊಡ್ಯೂಲ್ನಿಂದ ಪ್ರತ್ಯೇಕಗೊಂಡ ಲ್ಯಾಂಡರ್
ಆಗಸ್ಟ್ 18-20: ಡಿಬೂಸ್ಟಿಂಗ್ ಕಾರ್ಯಾಚರಣೆಯ ಬಳಿಕ 25 ಕಿ.ಮೀ. x 134 ಕಿ.ಮೀ. ಚಂದ್ರ ಕಕ್ಷೆಯನ್ನು ಪ್ರವೇಶಿಸಿದ ಲ್ಯಾಂಡರ್
ಆಗಸ್ಟ್ 21 : ಚಂದ್ರಯಾನ -2 ಆರ್ಬಿಟರ್ ನಿಂದ ಚಂದ್ರಯಾನ-3 ಲ್ಯಾಂಡರ್ ಮೊಡ್ಯೂಲ್ ಜೊತೆ ಯಶಸ್ವಿ ಸಂವಹ, ಚಂದ್ರನ ಮೇಲ್ಮೈಯ ಛಾಯಾಚಿತ್ರಗಳನ್ನು ರವಾನೆ.
ಆಗಸ್ಟ್ 23: ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ವಿಕ್ರಮ್ ಲ್ಯಾಂಡರ್