ಉದ್ಯೋಗಿಗಳಿಗೆ ಕಾರು ಮತ್ತು ಬೈಕ್ಗಳನ್ನು ಉಡುಗೊರೆಯಾಗಿ ನೀಡಿದ ಚೆನ್ನೈ ಮೂಲದ ಐಟಿ ಕಂಪೆನಿ
Photo : newindianexpress
ಚೆನ್ನೈ : ಚೆನ್ನೈ ಮೂಲದ ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ಕಂಪೆನಿಯು ದಸರಾ ಹಬ್ಬಕ್ಕೆ ತನ್ನ ಉದ್ಯೋಗಿಗಳಿಗೆ 28 ಕಾರುಗಳು ಮತ್ತು 29 ಬೈಕ್ಗಳನ್ನು ಕೊಡುಗೆಯಾಗಿ ನೀಡಿದೆ.
ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕೆಲಸದಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 2005 ರಲ್ಲಿ ಪ್ರಾರಂಭವಾದ ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ರಚನಾತ್ಮಕ ಉಕ್ಕಿನ ವಿನ್ಯಾಸ ಮತ್ತು ಡಿಟೇಲಿಂಗ್ ಸೇವೆಗಳನ್ನು ನೀಡುತ್ತಿದೆ.
"ಕಂಪೆನಿಯು ಉದ್ಯೋಗಿಗಳ ಕೊಡುಗೆಯನ್ನು ಅವರ ಕಾರ್ಯಕ್ಷಮತೆ, ವರ್ಷಗಳ ಸೇವೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ. ನಮ್ಮ ಉದ್ಯೋಗಿಗಳು ಅಸಾಧಾರಣ ಬದ್ಧತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಅವರ ಸಾಧನೆಗಳನ್ನು ಗುರುತಿಸಲು ನಾವು ಹೆಮ್ಮೆಪಡುತ್ತೇವೆ. ಅವರಿಗೆ ನೀಡುತ್ತಿರುವ ಕಾರುಗಳಲ್ಲಿ ಮಾರುತಿ ಸುಜುಕಿಸ್, ಹುಂಡೈಸ್, ಮರ್ಸಿಡಿಸ್ ಬೆಂಝ್ ಸೇರಿದೆ," ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್ ಹೇಳಿದ್ದಾರೆ.
"ಈ ಕೊಡುಗೆಗಳು ಉದ್ಯೋಗಿಗಳಿಗೆ ಹೆಚ್ಚಿನ ಕಾರ್ಯಕ್ಷಮತೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಕಾರು ಅಥವಾ ಬೈಕು ಖರೀದಿಸುವ ಪರಿಕಲ್ಪನೆಯು ಹಲವರಿಗೆ ಕನಸಿನಂತಿದೆ. ನಾವು ಉದ್ಯೋಗಿಗಳಿಗೆ ಬೈಕ್ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. 2022 ರಲ್ಲಿ ನಾವು ನಮ್ಮ ಇಬ್ಬರು ಹಿರಿಯ ಸಹೋದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ. ಈ ಬಾರಿ 28 ಕಾರುಗಳು ಮಾರುತಿ ಸುಜುಕಿಗಳು, ಹ್ಯುಂಡೈಸ್, ಮರ್ಸಿಡಿಸ್ ಬೆಂಝ್ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ಉದ್ಯೋಗಿಗೆ ಕಂಪನಿಯು ಆಯ್ಕೆ ಮಾಡಿದ್ದಕ್ಕಿಂತ ಉತ್ತಮವಾದ ವಾಹನ ಬೇಕಾದರೆ, ಉಳಿದ ಮೊತ್ತವನ್ನು ಪಾವತಿಸಬೇಕಾಗುತ್ತದೆ", ಎಂದು ಅವರು ಹೇಳಿದರು.
ಕಾರು ಮತ್ತು ಬೈಕ್ ಉಡುಗೊರೆಗಳ ಜೊತೆಗೆ, ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ತನ್ನ ಉದ್ಯೋಗಿಗಳಿಗೆ ಮದುವೆಗೆ ಆರ್ಥಿಕ ನೆರವು ನೀಡುತ್ತಿದೆ. ಈ ವರ್ಷ ಕಂಪನಿಯು ಮದುವೆಗೆ ಸಹಾಯಧನವನ್ನು 50,000 ರೂ.ಗಳಿಂದ 1 ಲಕ್ಷ ರೂ. ವಿಗೆ ಹೆಚ್ಚಿಸಿದೆ ಎಂದು ತಿಳಿದು ಬಂದಿದೆ.