40 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ವ್ಯಕ್ತಿ; ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ
Photo: ANI
ಹೊಸದಿಲ್ಲಿ: ರವಿವಾರ ದಿಲ್ಲಿಯ ಕೇಶೋಪುರ್ ಪ್ರದೇಶದ ಕೊಳವೆ ಬಾವಿಯೊಂದಕ್ಕೆ ವ್ಯಕ್ತಿಯೊಬ್ಬ ಬಿದ್ದಿದ್ದಾರೆ. ಕೇಶೋಪುರ್ ಮಂಡಿ ಪ್ರದೇಶದಲ್ಲಿರುವ ದಿಲ್ಲಿ ಜಲ ಮಂಡಳಿ ಘಟಕದಲ್ಲಿನ 40-50 ಅಡಿ ಆಳದ ಕೊಳವೆ ಬಾವಿಗೆ ವ್ಯಕ್ತಿಯೊಬ್ಬ ಬಿದ್ದಿದೆ ಎಂದು ದಿಲ್ಲಿ ಅಗ್ನಿಶಾಮಕ ಸೇವೆ ಸಂಸ್ಥೆಯು ಮಾಹಿತಿ ನೀಡಿದೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಘಟನಾ ಸ್ಥಳಕ್ಕೆ ಧಾವಿಸಿರುವ ದಿಲ್ಲಿ ಅಗ್ನಿಶಾಮಕ ಸೇವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ದಿಲ್ಲಿ ಪೊಲೀಸರ ತಂಡಗಳು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ.
ಉಸ್ತುವಾರಿ ಇನ್ಸ್ ಪೆಕ್ಟರ್ ವೀರ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಂಗ್, “ಕೊಳವೆ ಬಾವಿಗೆ ಸಮಾನಾಂತರವಾಗಿ ನಾವು ಮತ್ತೊಂದು ಕೊಳವೆ ಬಾವಿಯನ್ನು ಕೊರೆಯಲಿದ್ದೇವೆ. ಆದರೆ, ಇದು ದೀರ್ಘಕಾಲೀನ ಕಾರ್ಯಾಚರಣೆಯಾಗಲಿದೆ” ಎಂದು ತಿಳಿಸಿದ್ದಾರೆ.
ಈ ಮೊದಲು ಕೊಳವೆ ಬಾವಿಗೆ ಬಿದ್ದುರುವುದಾಗಿ ವರದಿಯಾಗಿತ್ತು. ಬಳಿಕ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದು, ಕೊಳವೆ ಬಾವಿಗೆ ಬಿದ್ದಿರುವುದು ಮಗುವಲ್ಲ ಎಂದು ತಿಳಿಸಿದ್ದಾರೆ.
UPDATE:
ಕೊಳವೆ ಬಾವಿಗೆ ಬಿದ್ದಿದ್ದ ವ್ಯಕ್ತಿಯು ಮೃತಪಟ್ಟಿದ್ದು, ಮೃತದೇಹವನ್ನು ಹೊರತೆಗೆಯಲಾಗಿದೆ.