ಇವಿಎಂ ಬ್ಯಾಟರಿ ಸಾಮರ್ಥ್ಯದ ಕುರಿತು ಚುನಾವಣಾ ಆಯೋಗದ ಮೆಟ್ಟಿಲೇರಿದ ಕಾಂಗ್ರೆಸ್ : ವಿಪಕ್ಷಗಳ ಆರೋಪ ಸ್ವೀಕಾರಾರ್ಹವಲ್ಲ ಎಂದ ಚುನಾವಣಾ ಆಯೋಗ
ಮಲ್ಲಿಕಾರ್ಜುನ ಖರ್ಗೆ | PC : PTi
ಹೊಸದಿಲ್ಲಿ: ಹರ್ಯಾಣ ವಿಧಾನಸಭಾ ಚುನಾವಣೆಗೆ ಬಳಸಲಾಗಿರುವ ಕೆಲವು ಇವಿಎಂ ಯಂತ್ರಗಳಲ್ಲಿ ಭಾರೀ ಲೋಪವಾಗಿದೆ ಎಂದು ಬುಧವಾರ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಮೆಟ್ಟಿಲೇರಿದೆ.
ಇದಕ್ಕೂ ಮುನ್ನ, ಹರ್ಯಾಣ ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷದ ವಾದವನ್ನು ತಳ್ಳಿ ಹಾಕಿದ್ದ ಚುನಾವಣಾ ಆಯೋಗವು, ಇದು ಈ ಹಿಂದೆಂದೂ ನಡೆಯದ ಘಟನೆಯಾಗಿದ್ದು, ದೇಶದ ಶ್ರೀಮಂತ ಪ್ರಜಾಸತ್ತಾತ್ಮಕ ಪರಂಪರೆಯಲ್ಲಿ ಇದುವರೆಗೂ ಕೇಳಿರದಿದ್ದ ಆರೋಪವಾಗಿದೆ ಎಂದು ಪ್ರತ್ಯುತ್ತರ ನೀಡಿತ್ತು.
ಹರ್ಯಾಣದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಳಸಲಾಗಿದ್ದ ಇವಿಎಂಗಳ ಕೆಲವು ಬ್ಯಾಟರಿಗಳು ಶೇ. 99ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ನಡೆಸಿದ್ದರೆ, ಮತ್ತೆ ಕೆಲವು ಶೇ. 60-70ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ನಡೆಸಿವೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗಕ್ಕೆ ಪತ್ರ ಸಲ್ಲಿಸುವುದಕ್ಕೂ ಮುನ್ನ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಜೈರಾಮ್ ರಮೇಶ್ ಹಾಗೂ ಪವನ್ ಖೇರ್ ವಿರುದ್ಧ ಕಠಿಣ ಶಬ್ದಗಳನ್ನು ಬಳಸಿರುವ ಪತ್ರವನ್ನು ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೆ ರವಾನಿಸಿದೆ.