ಕೇರಳದಲ್ಲಿ ಮುಂದುವರಿದ ಬಿಸಿ ವಾತಾವರಣ; 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಸಾಂದರ್ಭಿಕ ಚಿತ್ರ
ತಿರುವನಂತಪುರ: ಮೇ 6ರ ವರೆಗೆ ಅತ್ಯಧಿಕ ತಾಪಮಾನ ಹಾಗೂ ತೇವಾಂಶ ಸಾಧ್ಯತೆಯಿಂದಾಗಿ ಕೇರಳದ 14 ಜಿಲ್ಲೆಗಳ ಪೈಕಿ 12ರಲ್ಲಿ ಭಾರತದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಮೇ 6ರ ವರೆಗೆ ಪಾಲಕ್ಕಾಡ್ ಜಿಲ್ಲೆಯಲ್ಲಿ ಸುಮಾರು 39 ಡಿಗ್ರಿ ಸೆಲ್ಸಿಯಸ್, ಕೊಲ್ಲಂ, ತ್ರಿಶೂರು ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಸುಮಾರು 38 ಡಿಗ್ರಿ ಸೆಲ್ಸಿಯಸ್, ಆಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಸುಮಾರು 37 ಡಿಗ್ರಿ ಸೆಲ್ಸಿಯಸ್ ಹಾಗೂ ತಿರುವನಂತಪುರ, ಎರ್ನಾಕುಳಂ, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ಸುಮಾರು 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಲಿದೆ.
‘‘ಅತ್ಯಧಿಕ ತಾಪಮಾನ ಹಾಗೂ ಆರ್ದ್ರತೆಯ ಕಾರಣದಿಂದ ಮೇ 6ರ ವರೆಗೆ ಬೆಟ್ಟ ಪ್ರದೇಶಗಳನ್ನು ಹೊರತುಪಡಿಸಿ ಇತರ ಈ ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನ ಹಾಗೂ ಆರ್ದ್ರತೆಯ ವಾತಾವರಣ ಇರಲಿದೆ’’ ಎಂದು ಅದು ತಿಳಿಸಿದೆ.
Next Story