ಧೈರ್ಯವಿದ್ದರೆ ಸರಕಾರದ ಮಸೂದೆಗಳನ್ನು ಸೋಲಿಸಿ: ಪ್ರತಿಪಕ್ಷಗಳಿಗೆ ಪ್ರಹ್ಲಾದ್ ಜೋಶಿ ಸವಾಲು
ಹೊಸದಿಲ್ಲಿ: ಲೋಕಸಭೆಯಲ್ಲಿ ತಮ್ಮ ಬಳಿ ಸಂಖ್ಯಾಬಲವಿದೆ ಎಂಬ ನಂಬಿಕೆ ಇದ್ದರೆ ಸದನದಲ್ಲಿ ಸರಕಾರದ ಮಸೂದೆಗಳನ್ನು ಸೋಲಿಸುವಂತೆ ಪ್ರತಿಪಕ್ಷಗಳಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಸವಾಲೆಸೆದಿದ್ದಾರೆ.
ಲೋಕಸಭೆಯ ಮುಂದೆ ಅವಿಶ್ವಾಸ ನಿರ್ಣಯವು ಬಾಕಿ ಉಳಿದಿರುವ ಸಮಯದಲ್ಲಿ ಸರಕಾರವು ಶಾಸಕಾಂಗ ವ್ಯವಹಾರವನ್ನು ಕೈಗೆತ್ತಿಕೊಂಡಿರುವುದನ್ನು ಪ್ರತಿಪಕ್ಷಗಳು ಆಕ್ಷೇಪಿಸಿದ ನಂತರ ಜೋಶಿ ಈ ರೀತಿ ಪ್ರತಿವಾದಿಸಿದರು
"ಪ್ರತಿಪಕ್ಷದವರು ಇದ್ದಕ್ಕಿದ್ದಂತೆ ಅವಿಶ್ವಾಸ ನಿರ್ಣಯವನ್ನು ತಂದಿದ್ದಾರೆ, ಇದರರ್ಥ ಯಾವುದೇ ಸರಕಾರಿ ವ್ಯವಹಾರ ನಡೆಯಬಾರದೇ" ಎಂದು ಸಚಿವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
"ಅವರಿಗೆ ಸಂಖ್ಯಾಬಲವಿದ್ದರೆ, ಅವರು ಸದನದಲ್ಲಿ ಮಸೂದೆಗಳನ್ನು ಸೋಲಿಸಬೇಕು" ಎಂದು ಸಚಿವರು ಹೇಳಿದರು.
ಲೋಕಸಭೆಯು ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಕೈಗೆತ್ತಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾಗ ನೀತಿ ವಿಷಯಗಳೊಂದಿಗೆ ವ್ಯವಹರಿಸುತ್ತಿರುವ ಶಾಸಕಾಂಗ ವ್ಯವಹಾರವನ್ನು ಸರಕಾರ ನಡೆಸುತ್ತಿರುವುದು "ಅಪಹಾಸ್ಯ" ಮತ್ತು "ಸಭ್ಯತೆ ಮತ್ತು ಔಚಿತ್ಯ" ಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷವು ಹೇಳಿದೆ.