ದಿಲ್ಲಿ ವಿಧಾನಸಭೆ: ಕಪಿಲ್ ಮಿಶ್ರಾ ರಾಜೀನಾಮೆಗೆ ಪಟ್ಟು ಹಿಡಿದ ಆಪ್ನ 7 ಶಾಸಕರ ಅಮಾನತು
ಗಲಭೆ ಪ್ರಕರಣದಲ್ಲಿ ಮಿಶ್ರಾ ವಿರುದ್ಧ FIR ದಾಖಲಿಸಲು ಆದೇಶಿಸಿದ್ದ ನ್ಯಾಯಾಲಯ

ಕಪಿಲ್ ಮಿಶ್ರಾ | PC : PTI
ಹೊಸದಿಲ್ಲಿ: ದಿಲ್ಲಿಯಲ್ಲಿ 2020ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ದಿಲ್ಲಿ ಸಚಿವ ಕಪಿಲ್ ಮಿಶ್ರಾ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ನ್ಯಾಯಾಲಯವು ಆದೇಶಿಸಿದ ಬೆನ್ನಲ್ಲೇ ಕಪಿಲ್ ಮಿಶ್ರಾ ಅವರ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿ ವಿಧಾನಸಭೆಯಲ್ಲಿ ಆಪ್ ಶಾಸಕರು ಪ್ರತಿಭಟನೆ ನಡೆಸಿದರು.
ಸದನದ ಬಾವಿಗಿಳಿದು ಮಿಶ್ರಾ ಅವರ ವಿರುದ್ಧ ಘೋಷಣೆ ಕೂಗಿದ 7 ಆಪ್ ಶಾಸಕರನ್ನು ಸಭಾಪತಿ ವಿಜೇಂದ್ರ ಗುಪ್ತಾ ಸದನದಿಂದ ಅಮಾನತುಗೊಳಿಸಿದರು.
ಆಪ್ ಶಾಸಕರಾದ ಸಂಜೀವ್ ಝಾ, ಮುಖೇಶ್ ಅಹ್ಲಾವತ್, ಕುಲ್ದೀಪ್ ಕುಮಾರ್, ಜರ್ನೈಲ್ ಸಿಂಗ್ ಆಲೆ ಮಹಮ್ಮದ್, ಅನಿಲ್ ಝಾ ಅವರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.
Next Story