ಏರುತ್ತಿರುವ ತಾಪಮಾನ: ಎಸಿ ಲೋಕಲ್ ರೈಲುಗಳಿಗೆ ಹೆಚ್ಚಿದ ಬೇಡಿಕೆ
ಮುಂಬೈ: ಏರುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಲೋಕಲ್ ರೈಲುಗಳಲ್ಲಿ ಪ್ರಯಾಣಿಸಲು ಹೆಚ್ಚು ಬಯಸುತ್ತಿರುವ ಹಿನ್ನೆಲೆಯಲ್ಲಿ ಎಸಿ ಸೀಟುಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಮೇ 6ರಂದು ಪಶ್ಚಿಮ ರೈಲ್ವೆ 3,737 ಸೀಸನ್ ಟಿಕೆಟ್‌ಗಳನ್ನು ಎಸಿ ರೈಲುಗಳಲ್ಲಿ ನೀಡಿದ್ದು ಇದು ಎಸಿ ಲೋಕಲ್ ರೈಲುಗಳನ್ನು ಆರಂಭಿಸಿದ ನಂತರದ ಗರಿಷ್ಠವಾಗಿದೆ.
ಮೇ 6ರ ತನಕ ಈ ತಿಂಗಳು ಒಟ್ಟು 1,60,645 ಕಾರ್ಡ್ ಟಿಕೆಟ್‌ಗಳನ್ನು ಬುಕ್ ಮಾಡಲಾಗಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಇದು ಅಧಿಕವಾಗಿದೆ.
ಮುಂಬೈ ಸಬ್‌ಅರ್ಬನ್ ಜಾಲದಲ್ಲಿ ಎಸಿ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸುತ್ತಾರೆ.
ಪಶ್ಚಿಮ ರೈಲ್ವೆಯು ವಾರದ ದಿನಗಳಲ್ಲಿ 96 ಎಸಿ ಲೋಕಲ್ ರೈಲು ಸೇವೆಗಳನ್ನು ಒದಗಿಸುತ್ತಿದೆ. ಸೆಂಟ್ರಲ್ ರೈಲ್ವೆ ಪ್ರತಿದಿನ 66 ಸಬ್‌ಅರ್ಬನ್ ಎಸಿ ಸ್ಥಳೀಯ ರೈಲುಗಳನ್ನು ನಡೆಸುತ್ತಿದೆ.
Next Story