ದೇವಾಸ್ ಅಂತರಿಕ್ಷ ಪ್ರಕರಣ | ದಾಯ್ಷೆ ಟೆಲಿಕಾಮ್ ಗೆ 13.2 ಕೋಟಿ ಡಾಲರ್ ಪಾವತಿಸಲು ಭಾರತಕ್ಕೆ ಅಮೆರಿಕ ನ್ಯಾಯಾಲಯದ ನಿರ್ದೇಶನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇವಾಸ್ ಅಂತರಿಕ್ಷ ಪ್ರಕರಣದಲ್ಲಿ ಭಾರತವು ದಾಯ್ಷೆ ಟೆಲಿಕಾಮ್ ಗೆ 13.2 ಕೋಟಿ ಡಾಲರ್ ಗಳ ಪರಿಹಾರವನ್ನು ಪಾವತಿಸಬೇಕು ಎನ್ನುವುದನ್ನು ಅಮೆರಿಕದ ಕೊಲಂಬಿಯಾ ಜಿಲ್ಲಾ ನ್ಯಾಯಾಲಯವು ಎತ್ತಿ ಹಿಡಿದಿದೆ. ಕೆಳ ನ್ಯಾಯಾಲಯದ ತೀರ್ಪನ್ನು ದೃಢೀಕರಿಸುವಂತೆ ಕೋಟಿ ರಿ ಜರ್ಮನ್ ಕಂಪನಿ ದಾಯ್ಷೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ, ತೀರ್ಪನ್ನು ವಜಾಗೊಳಿಸುವಂತೆ ಭಾರತವು ಪ್ರತಿ ಅರ್ಜಿಯನ್ನು ಸಲ್ಲಿಸಿತ್ತು.
ಭಾರತವು ಜರ್ಮನಿಯೊಂದಿಗೆ ಮಾಡಿಕೊಂಡಿದ್ದ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಉಲ್ಲಂಘಿಸಿದೆ ಎನ್ನುವುದನ್ನು ಕಂಡುಕೊಂಡ ಬಳಿಕ ಅಂತರರಾಷ್ಟ್ರೀಯ ವ್ಯಾಪಾರ ಕಾನೂನು ಮಧ್ಯಸ್ಥಿಕೆ ಕುರಿತು ವಿಶ್ವಸಂಸ್ಥೆ ಆಯೋಗವು ಈ ತೀರ್ಪನ್ನು ಹೊರಡಿಸಿತ್ತು. ಸರಕಾರಿ ಸ್ವಾಮ್ಯದ ಅಂತರಿಕ್ಷ ಮತ್ತು ದೇವಾಸ್ ನಡುವಿನ ಸ್ಪೆಕ್ಟ್ರಂ ಒಪ್ಪಂದವನ್ನು 2011ರಲ್ಲಿ ಭಾರತ ಸರಕಾರವೇ ರದ್ದುಗೊಳಿಸಿದ್ದರಿಂದ ಭಾರತವು ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆಯೋಗವು ನಿರ್ಧರಿಸಿತ್ತು.
ತೀರ್ಪನ್ನು ಅಮೆರಿಕದಲ್ಲಿ ಜಾರಿಗೊಳಿಸುವಂತೆ ದಾಯ್ಷೆ ಕೋಟಿ ರಿತ್ತು. ಈ ತೀರ್ಪನ್ನು ಜಾರಿಗೊಳಿಸಲು ನ್ಯಾಯವ್ಯಾಪ್ತಿಯಿಂದ ಅಮೆರಿಕವು ಹೊರಗಿದೆ ಎಂಬ ಕಾರಣವನ್ನು ಮುಂದಿಟ್ಟು ಅರ್ಜಿಯನ್ನು ವಜಾಗೊಳಿಸಲು ಭಾರತವು ಪ್ರಯತ್ನಿಸಿತ್ತು. ಆದರೆ ಇದಕ್ಕೆ ನ್ಯಾಯಾಲಯವು ನಿರಾಕರಿಸಿತ್ತು.