ಹಿಂಸಾಚಾರ ಪೀಡಿತ ನೂಹ್ ಜಿಲ್ಲೆಯಲ್ಲಿ 2 ಡಝನ್ ಮೆಡಿಕಲ್ ಸ್ಟೋರ್ ಗಳನ್ನು ನೆಲಸಮಗೊಳಿಸಿದ ಜಿಲ್ಲಾಡಳಿತ
ಹೊಸದಿಲ್ಲಿ: "ಅಕ್ರಮ" ನಿರ್ಮಾಣದ ವಿರುದ್ಧ ಕಾರ್ಯಾಚರಣೆಯನ್ನು ಮೂರನೇ ದಿನವಾದ ಶನಿವಾರವೂ ಮುಂದುವರಿಸಿರುವ ಹರ್ಯಾಣದ ನೂಹ್ ಜಿಲ್ಲಾಡಳಿತವು ಇಂದು ಬೆಳಿಗ್ಗೆ ಸುಮಾರು ಎರಡು ಡಝನ್ ಮೆಡಿಕಲ್ ಸ್ಟೋರ್ ಗಳು ಹಾಗೂ ಇತರ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.
ಹಿಂಸಾಚಾರ ಪೀಡಿತ ನುಹ್ ಜಿಲ್ಲೆಯಿಂದ ಸುಮಾರು 20 ಕಿಮೀ ದೂರದ ತೌರುದಲ್ಲಿ ವಾಸಿಸುತ್ತಿದ್ದ ವಲಸಿಗರ ಗುಡಿಸಲುಗಳನ್ನು ಗುರುವಾರ ಸಂಜೆ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಕ್ಕಾಗಿ ನೆಲಸಮಗೊಳಿಸಲಾಗಿದೆ..
ನಲ್ಹಾರ್ ನ ಶಾಹೀದ್ ಹಸನ್ ಖಾನ್ ಮೇವಾಟಿ ಸರಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಮುಖ್ಯ ದ್ವಾರದ ಎದುರುಗಡೆ ಇರುವ ಸುಮಾರು ಎರಡು ಡಝನ್ ಅಂಗಡಿಗಳನ್ನು, ಬಹುತೇಕ ಔಷಧಾಲಯಗಳನ್ನು ಬುಲ್ಡೋಝರ್ ಮೂಲಕ ಕೆಡವಲು ಭಾರೀ ಪೊಲೀಸ್ ನಿಯೋಜಿಸಲಾಗಿತ್ತು. ಈ ಅಂಗಡಿಗಳು ಹಲವು ವರ್ಷಗಳಿಂದ ಇವೆ.
ಬುಲ್ಡೋಝರ್ ಕಾರ್ಯಾಚರಣೆ ದಿನವಿಡೀ ವಿವಿಧ ಸ್ಥಳಗಳಲ್ಲಿ ಮುಂದುವರೆಯಿತು, ಜಿಲ್ಲಾಡಳಿತದ ತಂಡಗಳು ಸ್ಥಳದಲ್ಲಿಯೇ ಇದ್ದವು.
ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ. ಬಂಧನಕ್ಕೆ ಹೆದರಿ ಹಲವರು ಓಡಿ ಹೋಗಿದ್ದಾರೆ.