ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ದೀಪಾವಳಿ ಬೋನಸ್
PHOTO : PTI
ಹೊಸದಿಲ್ಲಿ: ಗ್ರೂಪ್ ಸಿ, ಗ್ರೂಪ್ ಡಿ ಮತ್ತು ಗ್ರೂಪ್ ಬಿಯ ಕೆಲವು ವರ್ಗಗಳಿಗೆ ಸೇರಿದ ತನ್ನ ಉದ್ಯೋಗಿಗಳಿಗೆ ಕೇಂದ್ರ ಸರಕಾರವು ದೀಪಾವಳಿ ಬೋನಸ್ ಅನ್ನು ಘೋಷಿಸಿದೆ.
ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಆಯವ್ಯಯ ಇಲಾಖೆಯು ಗ್ರೂಪ್ ಸಿ, ಡಿ ನೌಕರರು ಮತ್ತು ಗುತ್ತಿಗೆ ಆಧಾರಿತ ಉದ್ಯೋಗಿಗಳು ಕೆಲವು ಸೇವಾ ಷರತ್ತುಗಳನ್ನು ಪೂರೈಸಿದರೆ ಈ ವರ್ಷ ಬೋನಸ್ ಪಡೆಯುತ್ತಾರೆ ಎಂದು ಹೇಳಿದೆ.
ಕೇಂದ್ರ ಅರೆಸೇನಾ ಮತ್ತು ಸಶಸ್ತ್ರ ಪಡೆಗಳ ಅರ್ಹ ಉದ್ಯೋಗಿಗಳಿಗೂ ಬೋನಸ್ ಅನ್ವಯಿಸುತ್ತದೆ. ಆದೇಶದ ಪ್ರಕಾರ, ಮಾರ್ಚ್ 31, 2021 ರಂತೆ ಸೇವೆಯಲ್ಲಿದ್ದ ಮತ್ತು 2020-21 ಆರ್ಥಿಕ ವರ್ಷದಲ್ಲಿ ಕನಿಷ್ಠ ಆರು ತಿಂಗಳ ನಿರಂತರ ಸೇವೆಯನ್ನು ಸಲ್ಲಿಸಿದ ನೌಕರರು ಈ ತಾತ್ಕಾಲಿಕ ಬೋನಸ್ಗೆ ಅರ್ಹರಾಗಿರುತ್ತಾರೆ.
The central government has approved a Diwali bonus for Group C and non-gazetted Group B rank officials, including paramilitary forces, with a maximum limit of Rs 7,000. (n/1) pic.twitter.com/IK0if6Swxh
— Press Trust of India (@PTI_News) October 17, 2023